ಸಮುದ್ರದಿಂದ ಕುಡಿಯುವ ನೀರು

Update: 2017-08-27 09:05 GMT

ಮರಳುಗಾಡಿನಲ್ಲಿ, ಸಮುದ್ರದ ನಡುವೆ ಕುಡಿಯುವ ನೀರಿನ ಮಹತ್ವವನ್ನು ಬಲ್ಲವರೇ ಬಲ್ಲರು. (ನೀರಿಲ್ಲದ ಸಂಕಷ್ಟವನ್ನು) ಕೈಗಾರಿಕತೆ, ಮಳೆಯ ಕೊರತೆಯಿಂದಾಗಿ ಕುಡಿ ಯುವ ನೀರಿನ ಕೊರತೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಇದು ಇನ್ನೂ ಹೆಚ್ಚಾಗುವ ಸೂಚನೆಗಳೇ ಕಾಣುತ್ತಿರುವ ಸಂದರ್ಭದಲ್ಲಿ, ಈ ಕೊರತೆಯನ್ನು ನೀಗಲು ಕೆಲವು ರಾಷ್ಟ್ರಗಳಲ್ಲಿ ಹಲವು ರೀತಿಯಸಂಶೋಧನೆಗಳು ನಡೆಯುತ್ತಿವೆ. ಇದು ಮೋಡದ ಬಿತ್ತನೆ ಇರಬ ಹುದು. ನೀರಿನ ಶುದ್ಧೀಕರಣವಿ ರಬಹುದು ಅಥವಾ ಸಮುದ್ರದ ನೀರಿನಿಂದ ಕುಡಿಯುವ ನೀರನ್ನು ಪಡೆಯುವುದೇ ಇರಬಹುದು. ಇತ್ತೀಚಿನ ದಿನಗ ಳಲ್ಲಿ ಸಮುದ್ರದ ನೀರನ್ನು ಶೋಧಿಸಿ ಕುಡಿಯುವ ನೀರನ್ನು ಪಡೆಯುವ ತಂತ್ರಜ್ಞತೆ ಮಹತ್ವವನ್ನು ಪಡೆಯುತ್ತಿದೆ. ಹಲವು ರಾಷ್ಟ್ರಗಳಲ್ಲಿ (ಮೊರೊಕ್ಕೊ, ಸೌದಿ ಅರೇಬಿಯಾ ದುಬೈ, ಇಸ್ರೇಲ್) ಈಗಾಗಲೇ ಬೃಹತ್ ಘಟಕಗಳಿಂದ ಕುಡಿಯುವ ನೀರನ್ನು ಪಡೆಯುತ್ತಿದ್ದಾರೆ. ಭಾರತದ ತಮಿಳುನಾಡಿನಲ್ಲಿ ಡಿಸ್ಸಾಲಿ ನೇಷನ್ ಘಟಕಗಳಿವೆ. ಈ ಹಿನ್ನೆಲೆಯಲ್ಲಿ Desalination ಅಥವಾ ಉಪ್ಪಿನ ಹಿಂಗಿಸುವಿಕೆಯ ಕ್ರಿಯೆಯನ್ನು ತಿಳಿಯೋಣ.

ಉಪ್ಪಿನ ಹಿಂಗಿಸುವಿಕೆಯು, ಉಪ್ಪು ನೀರಿನಿಂದ ಉಪ್ಪು ಮತ್ತಿತರ ಖನಿಜಗಳನ್ನು ತೆಗೆಯುವ ಕ್ರಿಯೆ. ಇದು ನೈಸರ್ಗಿಕವಾಗಿ ಭೂಮಿಯ ಮೇಲೆ ನಡೆಯುತ್ತಾ ಬಂದಿದೆ. ಸಮುದ್ರದ ನೀರು ಬಿಸಿಲಿನಲ್ಲಿ ಅವಿಯಾದಾಗ ನೀರಿನ ಅಂಶ ಕಳೆದುಕೊಳ್ಳುತ್ತದೆ. ಈ ಆವಿ ಗಾಳಿಯಲ್ಲಿ ಬೆರೆತು ಮೇಲೇರುವಾಗ ಸಾಂದ್ರತೆ ಹೆಚ್ಚುತ್ತಾ ಮೋಡ ಗಳಾಗುತ್ತವೆ. ಮೋಡಗಳು ದಟ್ಟವಾಗಿ ಕಾರ್ಮೋಡವಾದಾಗ ಮಳೆಯಾಗಿ ಸುರಿಯುತ್ತದೆ. ಆಗ ಸಂಪೂರ್ಣವಾಗಿ ಉಪ್ಪಿನಂಶ ವನ್ನು ಕಳೆದುಕೊಳ್ಳುತ್ತದೆ. ಇದು ಮಳೆಯ ಜೀವನಚಕ್ರ.

ಇದೇ ಕ್ರಿಯೆಯನ್ನು ಮನುಷ್ಯ ತಾನಾಗಿ ಮಾಡುವಾಗ ಪ್ರತಿ ಯೊಂದು ಹಂತದಲ್ಲೂ ಶಕ್ತಿಯ ಉಪಯೋಗವಾಗುತ್ತದೆ. ಇದು ಉಪ್ಪು ನೀರನ್ನು ಕುದಿಸುವಾಗ, ಆವಿಯನ್ನು ಸಾಂದ್ರೀಕರಿಸುವಾಗ, ಸಾಂದ್ರೀಕೃತ ಆವಿಯನ್ನು ತಂಪಾಗಿಸುವಾಗ ಹೇಗೆ ಪ್ರತಿಯೊಂದು ಹಂತಗಳ ಪ್ರಕ್ರಿಯೆಗಳು ಆ ನಂತರ ದೊರೆಯುವ ನೀರಿನ ಮೌಲ್ಯ ವನ್ನು ಹೆಚ್ಚಿಸುತ್ತವೆ. ಒಂದು ಅಂದಾಜಿನ ಪ್ರಕಾರ, 1,000 ಗ್ಯಾಲನ್ ನೀರನ್ನು ಶುದ್ಧೀಕರಿಸಲು 14 kw ನಷ್ಟು ಶಕ್ತಿಯು ವ್ಯಯ ವಾಗುತ್ತದೆ. ಇದು ಆಯಾ ದೇಶಗಳ ನೀತಿ ನಿಯಮಗಳಿಗನುಸಾ ರವಾಗಿ 2 ರಿಂದ 12 ಡಾಲರ್‌ಗಳವರೆಗೆ (1,000 ಗ್ಯಾಲನ್ ನೀರಿಗೆ) ಬೆಲೆಯಾಗುತ್ತಿದೆ. ತಮಿಳುನಾಡಿನಲ್ಲಿರುವ ಮಿಂಜೂರಿನ ಕಟ್ಟಪ್ಪಲ್ಲಿ ಎಂಬ ಗ್ರಾಮದಲ್ಲಿ 2010ರಲ್ಲಿ ಸುಮಾರು 100 ಮೆಗಾ ಲೀಟರಿನಷ್ಟು ನೀರಿನಿಂದ ಉಪ್ಪನ್ನು ಹಿಂಗಿಸಲಾಗುತ್ತಿದೆ. ಇಲ್ಲಿನ ಪ್ರತೀ ಸಾವಿರ ಲೀಟರ್ ನೀರಿಗೆ ರೂ. 49ನಷ್ಟು ಬೆಲೆಯಾಗುತ್ತದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಇನ್ನೊಂದು ಪ್ರಕ್ರಿಯೆಯಿಂದಲೂ ಸಮುದ್ರದ ನೀರಿನಿಂದ ಉಪ್ಪನ್ನು ಹಿಂಗಿಸುತ್ತಾರೆ. ಇದನ್ನು Reverse Osmosis ಎಂದು ಕರೆಯುತ್ತಾರೆ. ಈ ಪ್ರಕ್ರಿಯೆ ಯಲ್ಲಿ ಸಮುದ್ರದ ನೀರನ್ನು ಹಲವಾರು ಅರೆ ತೂರ್ಪುವಂತಹ ಪದರಗಳ ಮೂಲಕ ಹಾಯಿಸಿ, ಖನಿಜಗಳ ಅಣುಗಳನ್ನು ಹೊರ ತಗೆಯುತ್ತಾರೆ. ಇದಕ್ಕೂ ಮೊದಲು ಎರಡೂ ಹಂತಗಳಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಹೀಗೆ ಶುದ್ಧೀಕರಿಸಿದಾಗ ತೇಲುವ ಮತ್ತು ಕಣ್ಣಿಗೆ ಕಾಣುವ ಕಸಕಡ್ಡಿಗಳನ್ನು ಹೊರ ತೆಗೆಯಲಾಗುತ್ತದೆ. ಹೀಗೆ ಮಾಡುವುದರಿಂದ ಘಟಕದ ಆಯಸ್ಸು ಹೆಚ್ಚುತ್ತದೆ. ಆನಂತರ ನೀರಿನಲ್ಲಿರುವ ಖನಿಜಗಳಿಗನು ಸಾರವಾಗಿ ಬೇಕಾಗಿರುವ ಪದರ ಗಳ ಮೂಲಕ ನೀರನ್ನು ಹಾಯಿಸಿ ಅದರಲ್ಲಿರುವ ಉಪ್ಪಿನಂಶವನ್ನು, ಖನಿಜಾಂಶಗಳನ್ನು ಹಿಂದಿಡಿಯುತ್ತಾರೆ. (ಚಿತ್ರ-1)

ಸಾಮಾನ್ಯವಾಗಿ ನಡೆಯುವ ಆಸ್ಮೋಸಿಸ್ (Osmosis) ಕ್ರಿಯೆಯಲ್ಲಿ ಕಡಿಮೆ ಸಾಂದ್ರತೆಯಿರುವ ಕಡೆ ನೀರು ಹರಿಯು ತ್ತದೆ. ಆದರೆ Reverse Osmosis ಪ್ರಕ್ರಿಯೆಯಲ್ಲಿ ಹೆಚ್ಚಿನ ಸಾಂದ್ರತೆಯಿರುವ ಕಡೆ ನೀರನ್ನು ಹರಿಸಲಾಗುತ್ತದೆ.ಇದಕ್ಕಾಗಿ ನೀರನ್ನು ಹರಿಸುವ ವೇಗವನ್ನು ಖನಿಜಾಂಶಗಳ ಸಾಂದ್ರತೆಗ ನುಸಾರವಾಗಿ ನಿರ್ಧರಿಸಲಾಗುತ್ತದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಆವಶ್ಯಕತೆಗನುಸಾರವಾಗಿ ಮಾರ್ಪಾಡಿಸ ಬಹುದಾಗಿದೆ. ಹೀಗಾಗಿ ಘಟಕದ ಉಪಯುಕ್ತತೆಯು ಹೆಚ್ಚಾಗುತ್ತದೆ ಮತ್ತು ಖರ್ಚು ಹೆಚ್ಚು/ಕಡಿಮೆಯಾಗುತ್ತದೆ.

ಪ್ರಾಚೀನ ಕಾಲದಲ್ಲಿ ಗ್ರೀಕರಿಂದ ಪರಿಚಯಿಸಲ್ಪಟ್ಟ ಉಪ್ಪಿನ ಹಿಂಗಿಸುವಿಕೆಯ ಕ್ರಿಯೆಯು ಹಲವಾರು ಅನ್ವೇಷಣೆಗಳ ಮೂಲಕ ಪಕ್ವಗೊಂಡು 1748ರಲ್ಲಿ ಜೀನ್ ಆಂಟ್ವೈನ್ ನೊಲೆಟ್‌ರಿಂದ ಅಧಿಕೃತ ವಾಗಿ ಪರಿಚಯಿಸಲ್ಪಟ್ಟಿತು. ಜಾನ್ ಕ್ಯಾಡೋಟ್‌ರ Reverse Osmosisನ ಪೇಟೆಂಟ್ ಹೊಂದಿದ್ದು, ಅಮೆರಿಕ ವಿಶ್ವದ ಶೇ.20ರಷ್ಟು ಡಿಸಾಲಿನೇಷನ್ ಘಟಕಗಳನ್ನು ಹೊಂದಿದೆ.

Writer - ಪ್ರಭಾವತಿ.ಪಿ

contributor

Editor - ಪ್ರಭಾವತಿ.ಪಿ

contributor

Similar News