ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎನ್ನುವುದರ ಲಕ್ಷಣಗಳು

Update: 2017-08-27 10:40 GMT

ಸಾಕಷ್ಟು ನೀರು ಸೇವಿಸದಿರುವುದು ಆರೋಗ್ಯಕರ ಆಹಾರವನ್ನು ಸೇವಿಸದಿರುವಷ್ಟೇ ಅಥವಾ ಅದಕ್ಕೂ ಹೆಚ್ಚು ಕೆಟ್ಟದ್ದು ಎನ್ನುವುದು ಗೊತ್ತೇ? ಒಂದು ಗ್ಲಾಸ್ ನೀರು ಚಹಾ, ಕಾಫಿ ಅಥವಾ ಸೋಡಾಕ್ಕಿಂತ ಒಳ್ಳೆಯದು. ನೀವು ಸಾಕಷ್ಟು ನೀರು ಕುಡಿಯದಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎನ್ನುವುದನ್ನು ಸೂಚಿಸುವ ಲಕ್ಷಣಗಳು ಇಲ್ಲಿವೆ.

ಬಾಯಿ ಒಣಗುವಿಕೆ:

ನೀರು ಕುಡಿಯುವುದರಿಂದ ಅದು ಬಾಯಿಯಲ್ಲಿನ ಲೋಳೆಯ ಪದರವನ್ನು ಹಸಿಯಾಗಿರಿಸುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಅದು ಒಣಗುತ್ತದೆ.

ಸ್ನಾಯುಗಳ ಶಕ್ತಿಗುಂದುವಿಕೆ:

ನಮ್ಮ ಶರೀರದಲ್ಲಿನ ಸ್ನಾಯುಗಳು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಆದ್ದರಿಂದ ಕಡಿಮೆ ನೀರು ಸೇವನೆಯಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ.

ಸದಾ ಕಾಡುವ ಅನಾರೋಗ್ಯ:

ಸಾಕಷ್ಟು ನೀರನ್ನು ಕುಡಿಯುವುದರಿಂದ ಶರೀರದಲ್ಲಿನ ವಿಷಯುಕ್ತ ಅಂಶಗಳನ್ನು ಹೊರಹಾಕುವಲ್ಲಿ ನೆರವಾಗುತ್ತದೆ. ಹೀಗಾಗಿ ಸಾಕಷ್ಟು ನೀರನ್ನು ಕುಡಿಯದಿದ್ದರೆ ಇಂತಹ ವಿಷಕಾರಿ ಅಂಶಗಳು ಶರೀರದಲ್ಲಿಯೇ ಉಳಿದುಕೊಳ್ಳುತ್ತವೆ ಮತ್ತು ಆಗಾಗ್ಗೆ ಅನಾರೋಗ್ಯ ಕಾಡುತ್ತಿರುತ್ತದೆ.

ಆಲಸ್ಯ:

ಸಾಕಷ್ಟು ನೀರನ್ನು ಸೇವಿಸದಿದ್ದರೆ ಅದು ರಕ್ತನಾಳಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಮತ್ತು ಶರೀರದಲ್ಲಿ ಆಮ್ಲಜನಕದ ಕೊರತೆಯನ್ನುಂಟು ಮಾಡುತ್ತದೆ. ಇದರಿಂದ ಶರೀರದಲ್ಲಿ ಆಲಸ್ಯ ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News