ಬೆಂಗಳೂರು: ಆ.28ರಂದು ನೀರಿನ ಅದಾಲತ್
ಬೆಂಗಳೂರು, ಆ.27: ಬೆಂಗಳೂರು ಜಲ ಮಂಡಲಿಯ ದಕ್ಷಿಣ-4 ಮತ್ತು ವಾಯುವ್ಯ-1 ಉಪವಿಭಾಗಗಳಲ್ಲಿ ಆ.28ರಂದು ಬೆಳಗ್ಗೆ 9.30ರಿಂದ 11ರವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ನಡೆಯಲಿದೆ.
ದಕ್ಷಿಣ-4 ಉಪವಿಭಾಗ ವ್ಯಾಪ್ತಿಗೆ ಬರುವ ಎಚ್‌ಎಸ್‌ಆರ್ ಲೇಔಟ್, ಕೋಟಿಚಿಕ್ಕನಹಳ್ಳಿ, ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಿಟಿಎಂ 2ನೆ ಹಂತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಪರಿಶೀಲಿಸಿ ಬಗೆ ಹರಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ-2294 5143, 2294 5151 ಸಂಪರ್ಕಿಸಬಹುದು.
ವಾಯುವ್ಯ-1 ಉಪವಿಭಾಗ ವ್ಯಾಪ್ತಿಗೆ ಬರುವ ಕೇತಮಾರನಹಳ್ಳಿ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ 1ಮತ್ತು 2, ನಂದಿನಿ ಲೇಔಟ್-1 ಸೇವಾ ಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ರಾಜಾಜಿನಗರ 1ನೆ ಬ್ಲಾಕ್, ಕೇತಮಾರನ ಹಳ್ಳಿ, ವಿದ್ಯಾವರ್ಧಕ ಶಾಲೆ ಹಿಂಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಪರಿಶೀಲಿಸಿ ಬಗೆ ಹರಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.2294 5123, 2294 5176 ಸಂಪರ್ಕಿಸಬಹುದು.
ಕುಂದು ಕೊರತೆಗಳಿಗೆ ಸಂಬಂದಿಸಿದಂತೆ ಮಂಡಲಿಯ 24/7ದೂರು ನಿರ್ವಹಣಾ ಕೇಂದ್ರದ ದೂ.ಸಂಖ್ಯೆ-2223 8888, ಸಹಾಯವಾಣಿ 1916 ಹಾಗೂ ವಾಟ್ಸಾಪ್ ಸಂಖ್ಯೆ-87622 28888ನ್ನು ಸಂಪರ್ಕಿಸಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.