×
Ad

ಅಶೋಕ್ ಹೊಟೇಲ್ ಮುಖ್ಯದ್ವಾರ ತೆರವು

Update: 2017-08-27 20:07 IST

ಬೆಂಗಳೂರು, ಆ.27: ನಗರದ ಪ್ರತಿಷ್ಠಿತ ಲಲಿತ್ ಅಶೋಕ್ ಹೋಟೆಲ್‌ನ ಮುಖ್ಯದ್ವಾರವನ್ನು ಶನಿವಾರದ ಮಧ್ಯರಾತ್ರಿಯಿಂದ ತೆರೆಯಲಾಗಿದ್ದು, ರವಿವಾರ ಎಂದಿನಂದೆ ಮುಖ್ಯದ್ವಾರದಿಂದಲೇ ಗ್ರಾಹಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ 500 ಮೀಟರ್ ಒಳಗಿನ ಬಾರ್‌ಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಅಶೋಕ್ ಹೊಟೇಲ್ ಮುಖ್ಯರಸ್ತೆಯಿಂದ 500 ಮೀಟರ್ ಒಳಗಿದ್ದ ಕಾರಣ, ಒಂದೂವರೆ ತಿಂಗಳಿಂದ ಹೊಟೇಲ್‌ನ ಮುಖ್ಯದ್ವಾರಕ್ಕೆ ಅಡ್ಡಗೋಡೆ ನಿರ್ಮಿಸಲಾಗಿತ್ತು. ಇದಕ್ಕೆ ಬದಲಾಗಿ ಸಿಎಂ ಗೃಹ ಕಚೇರಿ ಕೃಷ್ಣಾ ಬಂಗಲೆಗೆ ಹೊಂದಿಕೊಂಡಿರುವ ಸಮನಾಂತರ ರಸ್ತೆ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು.

ಬುಧವಾರ ಸುಪ್ರೀಂಕೋರ್ಟ್ ನಗರ ಪ್ರದೇಶ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರಿಂದ ನಗರ ಪ್ರದೇಶದ ಬಾರ್‌ಗಳನ್ನು ಪುನರ್ ಆರಂಭ ಮಾಡಲಾಗಿದೆ. ಹೀಗಾಗಿ ಅಶೋಕ್ ಹೊಟೇಲ್ ಮುಖ್ಯದ್ವಾರದ ತಡೆಗೋಡೆ ತೆರವುಗೊಳಿಸಿದ್ದು, ಸಾರ್ವಜನಿಕರ ಮುಕ್ತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News