ಬೆಂಗಳೂರು: ಯುವಕನ ಕೊಲೆ
Update: 2017-08-27 22:28 IST
ಬೆಂಗಳೂರು, ಆ.27: ರೌಡಿಗಳ ಗುಂಪೊಂದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ನಡೆದಿದೆ.
ಪುನೀತ್ (25) ಮೃತಪಟ್ಟ ಯುವಕ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್‌ನ ರೌಡಿಶೀಟರ್ ವಿನೋದ ಅಲಿಯಾಸ್ ಕೋತಿ ಮತ್ತು ಆತನ ಸಹಚರರು ಕಾಶಿ ನಗರದ ಫ್ಯಾಕ್ಟರಿಯೊಂದರ ಶೆಡ್‌ಗೆ ಪುನೀತ್‌ನ್ನು ಎಳೆದೊಯ್ದು ಕೊಲೆ ಮಾಡಿದ್ದಾರೆ.
ಆರೋಪಿ ವಿನೋದ್ ಮೇಲೆ ಈಗಾಗಲೇ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಿದ್ದು, ಕೊಲೆ ಮಾಡಿದ ನಂತರ ಆರೋಪಿಗಳು ಮೃತದೇಹವನ್ನು ಶೆಡ್‌ನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತನಿಖೆ ಮುಂದುವರೆಸಿದ್ದಾರೆ.