ವಿದ್ಯಾರ್ಥಿಗಳನ್ನು ಥಳಿಸಿ ದರೋಡೆ
ಬೆಂಗಳೂರು, ಆ.27: ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಹಾಗೂ ಆತನ ಸ್ನೇತನನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನದ ಸರ, ನಗದು ದೋಚಿ ಪರಾರಿಯಾಗಿರುವ ಪ್ರಕರಣ ಸಂಜಯ್‌ನಗರದ ಭದ್ರಪ್ಪಲೇಔಟ್‌ನಲ್ಲಿ ನಡೆದಿದೆ.
ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಮನಃಶಾಸ್ತ್ರ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದ ಆಂಧ್ರಮೂಲದ ಮಣಿಕಂಠ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಚಿನ್ನಾಭರಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ದಾನೆ. ಹಲ್ಲೆಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಣಿಕಂಠ ಸ್ನೇತ ಕಾರ್ತಿಕ್ ಜೊತೆ ಸಂಜಯ್ ನಗರದಲ್ಲಿ ಶನಿವಾರ ರಾತ್ರಿ 12.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಭದ್ರಪ್ಪ ಲೇಔಟ್‌ನ ರೈಲ್ವೆ ಹಳಿ ಬಳಿಯ ಎಂಸಿಆರ್ ಬಾರ್‌ನ ಮುಂಭಾಗ ಸಿಗರೇಟ್ ತರಲು ಬೈಕ್ ನಿಲ್ಲಿಸಿ ನಡೆದು ಹೋಗುತ್ತಿದ್ದರು. ಆ ವೇಳೆ ದುಷ್ಕರ್ಮಿಗಳು ಇವರ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರ, ನಗದು ಕಿತ್ತು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.