ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ರೇವಣ್ಣ ಪ್ರಮಾಣವಚನ
Update: 2017-09-01 17:32 IST
ಬೆಂಗಳೂರು, ಸೆ.1: ರಾಜಭವನದ ಗಾಜಿನ ಮನೆಯಲ್ಲಿ ಶುಕ್ರವಾರ ಸಂಜೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಹಿರಿಯ ನಾಯಕ ಎಚ್.ಎಂ. ರೇವಣ್ಣ, ಆರ್.ಕೆ. ತಿಮ್ಮಾಪುರ ಹಾಗೂ ದಿವಂಗತ ಮಾಜಿ ಸಚಿವ ಮಹದೇವ ಪ್ರಸಾದ್‌ರ ಪತ್ನಿ ಗೀತಾ ಅವರಿಗೆ ರಾಜ್ಯಪಾಲ ವಜೂಭಾಯಿ ಪ್ರಮಾಣ ವಚನ ಬೋಧಿಸಿದರು.
ರೇವಣ್ಣ ಕ್ಯಾಬಿನೆಟ್ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಾಗೂ ಗೀತಾ ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ತಮ್ಮ ಬೆಂಬಲಿಗ ಷಡಕ್ಷರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.