×
Ad

ರಾಮಲಿಂಗಾ ರೆಡ್ಡಿಗೆ ಒಲಿದ ಗೃಹ ಖಾತೆ

Update: 2017-09-01 18:27 IST

ರೇವಣ್ಣ- ಸಾರಿಗೆ, ತಿಮ್ಮಾಪೂರ್-ಅಬಕಾರಿ, ಗೀತಾ-ಸಕ್ಕರೆ ಸಣ್ಣ ಕೈಗಾರಿಕೆ, ರಮೇಶ್ ಜಾರಕಿಹೊಳಿ-ಸಹಕಾರ

ಬೆಂಗಳೂರು, ಸೆ. 1: ಕೊನೆಯ ಕ್ಷಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ್ ರೈ ಅವರಿಗೆ ಗೃಹ ಖಾತೆ ಕೈತಪ್ಪಿದೆ. ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಗೃಹ ಖಾತೆಯನ್ನು ವಹಿಸಲಾಗಿದೆ.

ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ಎಚ್.ಎಂ.ರೇವಣ್ಣ ಅವರಿಗೆ ಸಾರಿಗೆ, ಆರ್.ಬಿ.ತಿಮ್ಮಾಪೂರ್ ಅವರಿಗೆ ಅಬಕಾರಿ, ಗೀತಾ ಮಹದೇವ ಪ್ರಸಾದ್ ಅವರಿಗೆ ಸಕ್ಕರೆ, ಸಣ್ಣ ಕೈಗಾರಿಕೆ ರಾಜ್ಯ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ.

ಸಣ್ಣ ಕೈಗಾರಿಕಾ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಹಕಾರ ಖಾತೆಯನ್ನು ನೀಡಲಾಗಿದೆ. ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಖಾತೆ ಜತೆಗೆ ಕೌಶಲ್ಯ ಅಭಿವೃದ್ಧಿಯನ್ನು ನೀಡಲಾಗಿದೆ.

ಪ್ರಿಯಾಂಕ ಖರ್ಗೆ, ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ, ರುದ್ರಪ್ಪ ಲಮಾಣಿ ಅವರಿಗೆ ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News