ಎಫ್‌ಡಿಎ-ಎಸ್‌ಡಿಎ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ಅಧಿಸೂಚನೆ
Update: 2017-09-01 19:50 IST
ಬೆಂಗಳೂರು, ಸೆ.1: ರಾಜ್ಯದಲ್ಲಿ ಖಾಲಿ ಇರುವ 507 ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಹಾಗೂ 551 ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು 2017ರ ಅಕ್ಟೋಬರ್ 7 ಕೊನೆ ದಿನ. ಅರ್ಜಿ ಸಲ್ಲಿಸಿ ಪರೀಕ್ಷಾ ಶುಲ್ಕವನ್ನು ಆಯ್ದ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಬೇಕು. ಅಂಚೆ ಕಚೇರಿಗಳಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು 2017ರ ಅಕ್ಟೋಬರ್ 9 ಕೊನೆ ದಿನವಾಗಿದೆ.
ನೆಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಆಯೋಗದ ವೆಬ್‌ಸೈಟ್ www.kpsc.kar.nic.in ಅನ್ನು ವೀಕ್ಷಿಬಹುದು ಎಂದು ಕೆಪಿಎಸ್ಸಿ ಪ್ರಕಟನೆ ತಿಳಿಸಿದೆ.