ಬೆಂಗಳೂರಿನ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

Update: 2017-09-01 15:13 GMT

ಬೆಂಗಳೂರು,ಸೆ.1: ಎರಡು ದಿನಗಳ ಹಿಂದೆ ಇಲ್ಲಿಯ ಅಶ್ವತ್ಥ ನಗರದಲ್ಲಿ ಯುವತಿ ಯೋರ್ವಳು ನೇಣು ಬಿಗಿದುಕೊಂಡು ಮತ್ತು ಕೆಲವೇ ಗಂಟೆಗಳಲ್ಲಿ ಆಕೆಯ ಸ್ನೇಹಿತ ಬಿನ್ನಿ ಮಿಲ್ಸ್ ಬಳಿ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಪ್ರಕರಣವೀಗ ಹೊಸ ತಿರುವು ಪಡೆದಿದೆ.

ತನ್ನನ್ನು ಪ್ರೇಮಿಸುವಂತೆ ಸ್ನೇಹಿತ ಮಲ್ಲೇಶ ನೀಡುತ್ತಿದ್ದ ಕಿರುಕುಳದಿಂದ ನೊಂದು ಸಿ.ಗಾಮಿನಿ(19) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮತ್ತು ಆಕೆಯ ಸಾವಿನಿಂದ ನೊಂದ ಮಲ್ಲೇಶ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿತ್ತು. ಮಾಧ್ಯಮಗಳೂ ಇದನ್ನೇ ಪ್ರಕಟಿಸಿದ್ದವು. ಆದರೆ ಗಾಮಿನಿಯ ಮುದ್ದಿನ ಪೊಮೋರಿಯನ್ ನಾಯಿ ‘ಜಿಮ್ಮಿ’ಯ ಸಾವು ಈ ಆತ್ಮಹತ್ಯೆಗಳಿಗೆ ಕಾರಣ ಎನ್ನುವುದು ಈಗ ಬೆಳಕಿಗೆ ಬಂದಿದೆ.

ಹೆತ್ತವರಿಗೆ ಏಕೈಕ ಪುತ್ರಿಯಾಗಿದ್ದ ಗಾಮಿನಿ ನಗರದ ಆರ್‌ಪಿಎ ಕಾಲೇಜಿನಲ್ಲಿ ಬಿ.ಕಾಮ್ ಓದುತ್ತಿದ್ದಳು. ತಂದೆ ಚಿಕ್ಕಸ್ವಾಮಿ ವಾಹನ ಚಾಲಕರಾಗಿ ದುಡಿಯುತ್ತಿದ್ದರೆ, ತಾಯಿ ವಿಜಯಲಕ್ಷ್ಮಿ ಶಿಕ್ಷಕಿಯಾಗಿದ್ದಾರೆ.

ಜಿಮ್ಮಿ ನಾಲ್ಕು ವರ್ಷಗಳಿಂದಲೂ ನಮ್ಮಿಂದಿಗಿತ್ತು. ಕಳೆದ ಜುಲೈನಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಜಿಮ್ಮಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಾಮಿನಿ ಅದರ ಸಾವಿನ ಬಳಿಕ ತುಂಬ ಬದಲಾಗಿದ್ದಳು. ಖಿನ್ನತೆಯಿಂದ ಬಳಲುತ್ತಿದ್ದಳು. ಆಕೆಯನ್ನು ಮೊದಲಿನಂತಾ ಗಿಸಲು ಎಲ್ಲ ಪ್ರಯತ್ನಗಳನ್ನೂ ನಾವು ಮಾಡಿದ್ದೆವು. ಕಳೆದ ವಾರ ಹೊಸದೊಂದು ನಾಯಿಮರಿಯನ್ನು ತಂದು ಸಾಕುತ್ತಿದ್ದು, ಅದಕ್ಕೂ ಜಿಮ್ಮಿ ಎಂದೇ ಹೆಸರಿಟ್ಟಿದ್ದೆವು. ಆದರೆ ಗಾಮಿನಿ ಹತಾಶೆಯಿಂದ ಹೊರಬಂದಿರಲಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿಜಯಲಕ್ಷ್ಮಿ ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News