×
Ad

ಚಿನ್ನಾಭರಣ ಕಳವು ಪ್ರಕರಣ: ಮಹಿಳೆ ಬಂಧನ

Update: 2017-09-05 21:35 IST

ಬೆಂಗಳೂರು, ಸೆ.5: ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಲು ಸ್ನೇಹಿತೆ ಜತೆ ಹೋಗಿ ಗೆಳೆಯನ ಮೂಲಕ ಮಾರ್ಗಮಧ್ಯೆಯೇ ಅವುಗಳನ್ನು ಕಳವು ಮಾಡಿಸಿದ್ದ ಪ್ರಕರಣ ಸಂಬಂಧ ಮಹಿಳೆಯನ್ನು ಇಲ್ಲಿನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಕೆಆರ್‌ಪುರಂ ಬಳಿಯ ಸೀಗೇಹಳ್ಳಿಯ ಕೌಶಲ್ಯಾ(35) ಬಂಧಿತ ಮಹಿಳೆಯಾಗಿದ್ದು, ಆಭರಣ ಕಳವು ಮಾಡಿದ್ದ ಆಕೆಯ ಗೆಳೆಯ ಸುದರ್ಶನ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ. ಬಂಧಿತ ಆರೋಪಿಯಿಂದ 7.38 ಲಕ್ಷ ರೂ. ಮೌಲ್ಯದ 257 ಗ್ರಾಂ ಚಿನ್ನಾಭರಣ, 383 ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈನಲ್ಲಿ ಮನೆಗೆಲಸ ಮಾಡುತ್ತಿದ್ದ ಕೌಶಲ್ಯಾ, 6 ತಿಂಗಳ ಹಿಂದೆ ನಗರಕ್ಕೆ ಬಂದು ಸೀಗೇಹಳ್ಳಿಯಲ್ಲಿ ನೆಲೆಸಿದ್ದು, ಮನೆಕೆಲಸಕ್ಕೆ ಮನೆಮನೆಗೆ ಹೋಗುತ್ತಿದ್ದಾಗ ಕೆ.ಆರ್.ಪುರದ ಆರ್‌ಕೆಎಂ ಲೇಔಟ್ ನಿವಾಸಿ ರೇಣುಕಾ ಶ್ರೀಧರ್ ಎಂಬುವರ ಪರಿಚಯವಾಗಿ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದಾಗ ಅವರ ಮನೆಯಲ್ಲಿ ಹೆಚ್ಚಿನ ಚಿನ್ನಾಭರಣ ಇರುವುದನ್ನು ಗಮನಿಸಿ ಈ ಕೃತ್ಯವೆಸಗಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News