ರಿಯಾದ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ; ಇಂಡಿಯನ್ ಸೋಶಿಯಲ್ ಫಾರಂ ಸಂತಾಪ

Update: 2017-09-05 19:20 GMT

ರಿಯಾದ್, ಸೆ. 6: ಖ್ಯಾತ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆಯನ್ನು ಇಂಡಿಯನ್  ಸೋಶಿಯಲ್ ಫಾರಂ ರಿಯಾದ್  ಕನಾಟಕ ರಾಜ್ಯ ಸಮಿತಿಯು ತೀವ್ರವಾಗಿ  ಖಂಡಿಸಿದೆ. 

ಗೌರಿ ಲಂಕೇಶ್ ರವರ ಹತ್ಯೆಯು ಸಮಸ್ತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರಗತಿಪರರ ಹತ್ಯೆಗಳು ಪ್ರಜಾಪಭುತ್ವದ ಕಗ್ಗೊಲೆಯಾಗಿದೆ. ರಾಜ್ಯ ಸರ್ಕಾರವು ಪ್ರೊಫೆಸ್ಸರ್ ಎಂ. ಕಲ್ಬುರ್ಗಿಯವರ ಹತ್ಯೆಯಾಗಿ ಎರಡು ವರ್ಷಗಳು ಕಳೆದರು ಆರೋಪಿಗಳನ್ನು ಪತ್ತೆಹಚ್ಚಲು ವಿಫಲವಾದ ಕಾರಣ ಇಂದು  ಪತ್ರಕರ್ತೆ ಗೌರಿ ಲಂಕೇಶ್ ರನ್ನು ಕಳೆದುಕೊಳ್ಳಬೇಕಾಯಿತು.

ಮಹಾರಾಷ್ಟ್ರದ ಗೋವಿಂದ್ ಪಾನ್ಸರೆ ಮಾತ್ತು ನರೇಂದ್ರ ದಂಬೋಲ್ಕರ್ ರವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಗೌರಿ ಲಂಕೇಶ್ ರನ್ನು ಕೊಂದ ಕಾರಣ ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಸಂಘಟಿತ ಮತ್ತು ಪೂರ್ವನಿಯೋಜಿತ  ಕೃತ್ಯವಾಗಿದೆ.

ರಾಜ್ಯ ಸರ್ಕಾರವು ತಕ್ಷಣವೇ ಗೌರಿ ಲಂಕೇಶ್ ರವರನ್ನು ಕೊಂದ ಆರೋಪಿ ಗಳನ್ನು ಮತ್ತು  ಸೂತ್ರದಾರ ಸಂಘಟನೆಗಳಿಗೆ ಬಂಧಿಸಿ, ನಿಷೇಧಿಸಬೇಕೆಂದು ಮತ್ತು ಇತರ ಪ್ರಗತಿಪರ ಚಿಂತಕರಿಗೆ ಸೂಕ್ತ ಭಾದ್ರತೆ ಒದಗಿಸಬೇಕೆಂದು  ಇಂಡಿಯನ್  ಸೋಶಿಯಲ್ ಫಾರಂ  ರಿಯಾದ್ ಕನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News