ಪ್ರಗತಿಪರ ಚಿಂತಕಿ, ಮಾನವ ಹಕ್ಕು ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆಗೆ ಇಂಡಿಯನ್ ಸೋಶಿಯಲ್ ಫೋರಮ್ ಖಂಡನೆ

Update: 2017-09-06 09:26 GMT

ದಮಾಮ್, ಸೆ. 6: ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟವನ್ನೇ ಜೀವನವನ್ನಾಗಿಸಿದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ರವರ ಹತ್ಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ- ದಮಾಮ್, ರಿಯಾದ್ ಹಾಗೂ ಜಿದ್ದಾ ಘಟಕ  ತೀವ್ರವಾಗಿ ಖಂಡಿಸುತ್ತದೆ.

ಗೌರಿಲಂಕೇಶ್, ತಮ್ಮ ಜೀವನದ್ದುದ್ದಕ್ಕೂ ಲೇಖನ ಮತ್ತು ವಿಚಾರಧಾರೆಯ ಮೂಲಕ ಜಾತ್ಯತೀತ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗಾಗಿ ಶ್ರಮಿಸಿದ್ದರು. ಯಾವುದೇ ಸಂದರ್ಭದಲ್ಲಿಯೂ ಫ್ಯಾಶಿಸ್ಟ್  ಶಕ್ತಿಗಳೊಂದಿಗೆ ರಾಜಿಯಿಲ್ಲದೆ ವೈಚಾರಿಕವಾಗಿ ಸಂಘರ್ಷ ನಡೆಸುತ್ತಲೇ ಬಂದಿರುವ ಗೌರಿಲಂಕೇಶ್ ರವರು ಓರ್ವ ಮಾನವತಾವಾದಿ ದಿಟ್ಟ ಮಹಿಳೆ  ಯಾಗಿದ್ದರು.

ಗಾಂಧೀಜಿಯನ್ನು ಕೊಲ್ಲುವ ಮೂಲಕ ನಾಥೂರಾಮ್ ಗೋಡ್ಸೆಯಿಂದ ಪ್ರಾರಂಭವಾದ ಫ್ಯಾಸಿಸ್ಟ್ ಶಕ್ತಿಗಳ ಭಯೋತ್ಪಾದಕ ಆಕ್ರಮಣವು ಮುಂದುವರೆದು ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ, ಗೌರಿಲಂಕೇಶ್ ಮುಂತಾದ ಗಾಂಧಿವಾದಿಗಳ ಹತ್ಯೆಯವರೆಗೆ ಮುಂದುವರೆದಿದೆ. ನಾಡು ಕಂಡ ಧಿಮಂತ ಪತ್ರಕರ್ತೆ ,ಚಿಂತಕಿ, ವಿಚಾರವಂತೆ, ಹೋರಟಗಾರ್ತಿ,ಪ್ರಗತಿಪರ ಬರಹಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡನಿಯವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಪೈಶಾಚಿಕ ಕೃತ್ಯ ನಡೆಸಿದ  ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ  ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್, ರಿಯಾದ್ ಹಾಗೂ ಜಿದ್ದಾ ಘಟಕದ ಪಧಾದಿಕಾರಿಗಳು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ನಾಡಿನ ಮಾನವಹಕ್ಕು ಹೋರಾಟಗಾರರಿಗೆ ಸರಕಾರವು ಸೂಕ್ತಭದ್ರತೆ ಒದಗಿಸುವ ಮೂಲಕ ಹೋರಾಟಗಾರರಿಗೆ ಮತ್ತು ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಆಗ್ರಹಿಸುತ್ತದೆ.

ಇಂಡಿಯನ್ ಸೋಶಿಯಲ್ ಫೋರಮ್

ಕರ್ನಾಟಕ ರಾಜ್ಯಘಟಕ

ಸೌದಿಅರೇಬಿಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News