×
Ad

ಧರಣಿ ಕೈಬಿಟ್ಟ ಆಶಾ ಕಾರ್ಯಕರ್ತರು

Update: 2017-09-08 22:45 IST

ಬೆಂಗಳೂರು, ಸೆ.8: ಆಶಾ ಕಾರ್ಯಕರ್ತರಿಗೆ ತಕ್ಷಣದಿಂದ 3,500 ರೂ. ಮಾಸಿಕ ಭತ್ತೆ ನೀಡಲು ಸರಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತರು ನಗರದ ಸ್ವಾತಂತ್ರ ಉದ್ಯಾನದಲ್ಲಿ ಎರಡು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದಾರೆ.

ಮಾಸಿಕ ವೇತನ ನಿಗದಿ, ಆಶಾ ಸಾಫ್ಟ್ ರದ್ದತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಎರಡು ದಿನಗಳಿಂದ ಅಹೋರಾತ್ರಿ ಧರಣಿ ಕೈಗೆತ್ತಿಕೊಂಡಿದ್ದರು.

ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಕೆ ಕುರಿತಂತೆ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾಸಿಕ ಭತ್ತೆಯನ್ನು ತಕ್ಷಣದಿಂದ ಅನ್ವಯವಾಗುವಂತೆ 3,500 ಸಾವಿರ ರೂ.ಗೆ ಹೆಚ್ಚಿಸಿ ನೀಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ನಿರ್ಧಾರವನ್ನು ಪ್ರಕಟಿಸಿದರು. ಅಲ್ಲದೆ, ತಿಂಗಳ ಭತ್ತೆಯನ್ನು ಮುಂದಿನ ದಿನಗಳಲ್ಲಿ ಆರು ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಆಶಾ ಕಾರ್ಯಕರ್ತರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಘೋಷಿಸಿದರು.

ಆಶಾ ಕಾರ್ಯಕರ್ತರು ಮುಂದಿಟ್ಟಿದ್ದ ಬೇಡಿಕೆಗಳಲ್ಲಿ 6 ಸಾವಿರ ರೂ.ಮಾಸಿಕ ಭತ್ತೆ, ಆಶಾ ಸ್ಟಾಫ್ ರದ್ದು, ರಿಯಾಯಿತಿ ಅಥವಾ ಉಚಿತ ಬಸ್ ಪಾಸ್, ಆಶಾ ಕಾರ್ಯಕರ್ತ ಸಶಕ್ತಕರಣಕ್ಕೆ 20 ಸದಸ್ಯರಿರುವ ಸ್ತ್ರೀ ಶಕ್ತಿ ಗುಂಪುಗಳ ರಚನೆಯ ಜೊತೆಗೆ ತಲಾ ಎರಡು ಲಕ್ಷದವರಿಗೂ ಬಡ್ಡಿ ರಹಿತ ಸಾಲ, ರಾಜ್ಯಾದ್ಯಂತ ಆರು ಸಾವಿರ ಆಶಾ ವಸತಿ ಸೇರಿದಂತೆ ಇತರೆ ನ್ಯಾಯಯುತ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದೆ.

ಈ ಭರವಸೆಗೆ ಎಲ್ಲ ಆಶಾ ಕಾರ್ಯರ್ತರು ಒಪ್ಪಿ ಸಂತೋಷದಿಂದ ಅಹೋ ರಾತ್ರಿ ಧರಣಿಯನ್ನು ಕೈಬಿಡಲಾಗಿದೆ ಎಂದು ನಾಗಲಕ್ಷ್ಮೀ ಹೇಳಿದರು.

ಅಸ್ವಸ್ಥರಾದ ಕಾರ್ಯಕರ್ತೆಯರು: ಮಳೆಯನ್ನು ಲೆಕ್ಕಿಸದೆ ಕಳೆದ ಎರಡು ದಿನದಿಂದ ನಡೆಸುತ್ತಿದ್ದ ಧರಣಿಯಲ್ಲಿ ಆಶಾ ಕಾರ್ಯಕರ್ತರಲ್ಲಿ ಕೆಲವರು ಅಸ್ವಸ್ಥರಾದರು. ಕೂಡಲೇ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಧರಣಿಯಲ್ಲಿ ಹಲವು ತೊಂದರೆಗಳಾಗಿವೆ. ಮಳೆ ಬಿಸಿಲು ಲೆಕ್ಕಿಸದೆ ಅಹೋರಾತ್ರಿ ನಡೆಸಿದ ನಮ್ಮ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಧರಣಿ ಕೈಗೆತ್ತಿಕೊಳ್ಳಲಾಗುವುದು.
 -ಡಿ.ನಾಗಲಕ್ಷ್ಮೀ ,ರಾಜ್ಯ ಆಶಾ ಕಾರ್ಯಕರ್ತರ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News