ಸಮವಸ್ತ್ರ ಧರಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಗಂಡು ಮಕ್ಕಳ ಶೌಚಾಲಯದಲ್ಲಿ ನಿಲ್ಲಿಸಿದರು !

Update: 2017-09-11 07:48 GMT

ಹೈದರಾಬಾದ್,ಸೆ.11: ಶಾಲೆಗೆ ಸಮವಸ್ತ್ರ ಧರಿಸದೆ ಬಂದದ್ದಕ್ಕೆ ಹನ್ನೊಂದು ವರ್ಷದ ಬಾಲಕಿಯನ್ನು ಗಂಡು ಮಕ್ಕಳ ಶೌಚಾಲಯಕ್ಕೆ ಕಳುಹಿಸಿದ ಘಟನೆ . ಹೈದರಾಬಾದ್‌ನಲ್ಲಿ ನಡೆದಿದೆ.

ಸಮವಸ್ತ್ರ ಧರಿಸದೆ ಶಾಲೆಗೆ ಬಂದದ್ದರ ಹೆಸರಿನಲ್ಲಿ ಅಧ್ಯಾಪಕರು ಹೀಗೆ ಶಿಕ್ಷಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಸಮವಸ್ತ್ರ ಧರಿಸದಿದ್ದಕ್ಕೆ ಮೂವರು ಅಧ್ಯಾಪಕರು ಅವಾಚ್ಯವಾಗಿ ಬೈದಿದ್ದಾರೆ, ಹೊಡೆದಿದ್ದಾರೆ ನಂತರ ಗಂಡು ಮಕ್ಕಳ ಶೌಚಾಲಯಕ್ಕೆ ಬಲವಂತದಿಂದ ಕಳುಹಿಸಿದ್ದಾರೆಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಒಗೆದ ಸಮವಸ್ತ್ರ ಒಣಗಿಲ್ಲದ್ದರಿಂದ ಸಾಮಾನ್ಯ ಬಟ್ಟೆ ತೊಡಿಸಿ ಕಳುಹಿಸಿದ್ದೇನೆ ಎಂದು ಸ್ಕೂಲ್ ಡೈರಿಯಲ್ಲಿ ತಾಯಿ ಬರೆದು ಕೊಟ್ಟಿದ್ದರೆಂದು ವಿದ್ಯಾರ್ಥಿನಿ ಹೇಳಿದ್ದಾರೆ. ಅಧ್ಯಾಪಕರಿಗೆ ಹೇಳಿದರೂ ಯಾವ ಅಧ್ಯಾಪಕರೂ ಡೈರಿಯನ್ನು ನೋಡಲಿಲ್ಲ.

  ಘಟನೆ ವಿವಾದವಾಗುವುದರೊಂದಿಗೆ ಅಧ್ಯಾಪಕರು ಮತ್ತುಶಾಲೆಯಾಡಳಿತದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾನವಹಕ್ಕು ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಪೊಕ್ಸೊ ಕಾನೂನು ಪ್ರಕಾರ ಕೇಸು ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಮಾನವಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ಮಕ್ಕಳ ಹಕ್ಕು ಕಾರ್ಯಕರ್ತ ಅಚ್ಯುತ ರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News