ಬೆದರಿಕೆ ಹಾಕಿ ನನಗೆ ಅವಕಾಶ ಸಿಗದಂತೆ ಮಾಡಿದ ದಿಲೀಪ್: ನಟ ಅನೂಪ್ ಚಂದ್ರನ್

Update: 2017-09-11 07:57 GMT

ಕೊಚ್ಚಿ,ಸೆ. 11: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವ ನಟದಿಲೀಪ್ ವಿರುದ್ಧ ನಟ ಅನೂಪ್ ಚಂದ್ರನ್ ಪೊಲೀಸರಿಗೆ ಸಾಕ್ಷ್ಯ ನೀಡಿದ್ದಾರೆ. ಮೌಸ್ ಆಂಡ್ ಕ್ಯಾಟ್ ಎನ್ನುವ ಸಿನೆಮಾದ ಲೊಕೇಶನ್‌ನಲ್ಲಿ ತನಗೆ ದಿಲೀಪ್ ಬೆದರಿಕೆ ಹಾಕಿದ್ದಾರೆ. ದಿಲೀಪ್ ತನಗೆ ಅವಕಾಶ ಸಿಗದೆ ಮಾಡಿದ್ದಾರೆ ಎಂದು ಅನೂಪ್ ಪೊಲೀಸರಿಗೆ ತಿಳಿಸಿದ್ದಾರೆ.

ಎರ್ನಾಕುಲಂ ಗ್ರಾಮಾಂತರ ಎಸ್ಪಿ ಫೋನ್ ಮೂಲಕ ಅನೂಪ್ ಚಂದ್ರನ್‌ರ ಸಾಕ್ಷ್ಯವನ್ನು ಪಡೆದಿದ್ದಾರೆ. ಒಂದು ಟೆಲಿವಿಷನ್ ಕಾರ್ಯಕ್ರಮದ ಮಿಮಿಕ್ರಿಯ ವಿರುದ್ಧ ತಾನು ಮಾತಾಡಿದ್ದಕ್ಕೆ ದಿಲೀಪ್ ಫೋನ್ ಮಾಡಿ ಕೋಪದಲ್ಲಿ ಮಾತಾಡಿದ್ದರು ಎಂದು ಅನೂಪ್ ಚಂದ್ರನ್ ಹೇಳಿದರು.

ಸಿನೆಮಾ ಲೊಕೇಶ್‌ನಲ್ಲಿ ಬೆದರಿಕೆ ಹಾಕಿದ್ದಾರೆ. ನಂತರ ಸಿನೆಮಾದಲ್ಲಿ ಹಲವು ಅವಕಾಶಗಳು ತನಗೆ ನಷ್ಟವಾಯಿತು ಎಂದು ಅನೂಪ್ ಚಂದ್ರನ್ ಸಾಕ್ಷ್ಯ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News