ಎಂ.ಎ.ಎಸ್. ಅಬೂಬಕರ್ ಹಾಜಿ
Update: 2017-09-11 21:20 IST
ಮೂಡಬಿದಿರೆ, ಸೆ. 11: ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ, ಉದ್ಯಮಿ, ತೋಡಾರು ನಿವಾಸಿ ಎಂ.ಎ.ಎಸ್ ಅಬೂಬಕರ್ ಹಾಜಿ (63) ಸೋಮವಾರ ಸ್ವಗೃಹದಲ್ಲಿ ನಿಧನರಾದರು.
ಜಾತ್ಯತೀತ ಜನತಾ ದಳ(ಎಸ್) ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಮಂಗಳೂರು ತಾ.ಪಂ.ನ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿ ಸಿದ್ದರು. ತೋಡಾರು ಬದ್ರಿಯಾ ಸುನ್ನಿ ಜುಮಾ ಮಸೀದಿಯ ಅಧ್ಯಕ್ಷರಾಗಿ, ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ತೋಡಾರು -ಮಿಜಾರು ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಅಶ್ವಿನ್ ಜೆ. ಪಿರೇರಾ, ದಿವಾಕರ ಶೆಟ್ಟಿ ತೋಡಾರು, ಹರಿಪ್ರಸಾದ್ ಶೆಟ್ಟಿ ಪಾಲಡ್ಕ ಸಹಿತ ಗಣ್ಯರು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.