ಬ್ರಿಟನ್‌ನಲ್ಲಿ ದಾವೂದ್ ಆಸ್ತಿ-ಪಾಸ್ತಿ ಜಪ್ತಿ

Update: 2017-09-13 05:36 GMT

ಲಂಡನ್, ಸೆ.13: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ-ಪಾಸ್ತಿಯನ್ನು ಬ್ರಿಟನ್ ಸರಕಾರ ಜಪ್ತಿ ಮಾಡಿದೆ.

ಬ್ರಿಟನ್‌ನಲ್ಲಿ ದಾವೂದ್ ಹೊಂದಿರುವ ಆಸ್ತಿ-ಪಾಸ್ತಿ ಜಪ್ತಿ ಮಾಡುವಂತೆ 2015ರಲ್ಲೇ ಭಾರತ ಸರಕಾರ ಮನವಿ ಮಾಡಿತ್ತು. ಇದೀಗ ಭಾರತದ ಮನವಿಗೆ ಸ್ಪಂದಿಸಿರುವ ಬ್ರಿಟನ್ ಸರಕಾರ ವಾರ್ವಿಕ್‌ಶೈರ್‌ನಲ್ಲಿರುವ ದಾವೂದ್‌ಗೆ ಸೇರಿರುವ ಕೋಟ್ಯಂತರ ರೂ. ಮೌಲ್ಯದ ರೆಸ್ಟೊರೆಂಟ್ ಹಾಗೂ ಹಲವು ಕಟ್ಟಡಗಳನ್ನು ಜಪ್ತಿ ಮಾಡಿದೆ.

ಭಾರತ, ದುಬೈ ಬಳಿಕ ಇದೀಗ ಲಂಡನ್‌ನಲ್ಲಿನ ದಾವೂದ್‌ನ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಲಾಗಿದೆ. 1993ರ ಮುಂಬೈ ಬಾಂಬುಸ್ಫೋಟದ ರೂವಾರಿ ದಾವೂದ್ ಬ್ರಿಟನ್‌ನಲ್ಲಿ ಸುಮಾರು 4 ಸಾವಿರ ಕೋಟಿ ರೂ. ಸಂಪತ್ತು ಹೊಂದಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News