ಶುಕ್ರವಾರ, ಶನಿವಾರ 'ಕರ್ನಾಟಕ ಬಂದ್' ಇದೆಯೇ?

Update: 2017-09-14 15:43 GMT

ಬೆಂಗಳೂರು, ಸೆ.14: “ಕಾವೇರಿ ನೀರಿಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ  ಸೆ.20ರವರೆಗೆ ಕರ್ನಾಟಕ ಬಂದ್ ಹಮ್ಮಿಕೊಳ್ಳಲಾಗಿದೆ. ಬಸ್ ಮತ್ತು ಆಟೋ ಸಂಚಾರ ನಾಳೆ ಸ್ಥಗಿತಗೊಳ್ಳಲಿದ್ದು, ಲಾರಿ ಚಾಲಕರು, ಸಾರಿಗೆ ಕಾರ್ಮಿಕರು, ಚಿತ್ರೋದ್ಯಮ ಸೇರಿದಂತೆ 800ಕ್ಕೂ ಅಧಿಕ ಸಂಘಟನೆಗಳು ಬಂದ್ ಗೆ ಸಹಕಾರ ನೀಡಲಿದೆ”… ಇಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಸಂದೇಶವನ್ನು ಓದಿದ ಹಲವರು ಶುಕ್ರವಾರ ಕರ್ನಾಟಕ ಬಂದ್ ಇದೆಯೋ?, ಇಲ್ಲವೋ?, ನಾಳೆ ಬಸ್ ಆಟೊ ಸಂಚಾರ ಇರಲಿದೆಯೇ, ಸಾರಿಗೆ ವ್ಯವಸ್ಥೆಗೆ ಸಮಸ್ಯೆಯಾಗಬಹುದೇ? ಎನ್ನುವ ಗೊಂದಲದಲ್ಲಿದ್ದಾರೆ.

ಆದರೆ ಶುಕ್ರವಾರ ಹಾಗೂ ಶನಿವಾರ ಯಾವುದೇ ಬಂದ್ ಇಲ್ಲ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಶಾಸಕರು ನಡೆಸುತ್ತಿರುವ ಧರಣಿಯ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಮಾತುಕತೆ ಫಲಪ್ರದವಾದಲ್ಲಿ ಶಾಸಕರು ಧರಣಿಯನ್ನು ಹಿಂದೆಗೆದುಕೊಳ್ಳಲಿದ್ದಾರೆ. ಫಲಪ್ರದವಾಗದೇ ಇದ್ದ ಪಕ್ಷದಲ್ಲಿ ಬಂದ್ ಗೆ ಕರೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಅದಿನ್ನೂ ಸ್ಪಷ್ಟಗೊಂಡಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ, "ಕಾವೇರಿ ನೀರಿಗೆ ಆಗ್ರಹಿಸಿ ಸೆ.14ರಿಂದ 20ರವರೆಗೆ ಕರ್ನಾಟಕ ಬಂದ್" ಎನ್ನುವ ಸಂದೇಶಗಳು ಅಪ್ಪಟ ಸುಳ್ಳಾಗಿದ್ದು. ಇದು ಕಿಡಿಗೇಡಿಗಳ ಕೃತ್ಯವಾಗಿದೆ ಎನ್ನುವುದಂತೂ ಸ್ಪಷ್ಟ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News