ಪ್ರತೀ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಸಹಕಾರ: ಮುರಳೀಧರ ಹಾಲಪ್ಪ

Update: 2017-09-15 16:24 GMT

ಬೆಂಗಳೂರು, ಸೆ.15: ಯುವ ಜನತೆಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ವೃತ್ತಿತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ವತಿಯಿಂದ ನಗರದ ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಸ್ಟರ್‌ಕ್ಯಾಮ್ ಸಿಎನ್‌ಸಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಶಯ ಮತ್ತು ಕನಸನ್ನು ನನಸುಗೊಳಿಸಲು ಕೌಶಲ್ಯ ಕರ್ನಾಟಕವನ್ನು ನಿರ್ಮಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ ತಿಂಗಳ ಒಳಗೆ 5 ಲಕ್ಷ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಾಗುವುದು. ಒಂದು ಲಕ್ಷ ಉದ್ಯೋಗಾವಕಾಶ ಕಲ್ಪಿಸಲು ಯೋಜಿಸಲಾಗಿದೆ. ಕಾಸಿಯಾ ನೀಡುವ ತರಬೇತಿ ಪ್ರಮಾಣ ಪತ್ರಕ್ಕೆ ಮಾನ್ಯತೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಕಾಸಿಯಾ ಅಧ್ಯಕ್ಷ ಆರ್.ಹನುಮಂತೇಗೌಡ, ಕಾಸಿಯಾ ಸಣ್ಣ ಕೈಗಾರಿಕೆಗಳ ಶ್ರೇಯೋಭಿವೃದ್ಧಿಗೆ ಸ್ಥಾಪನೆಯಾಗಿರುವ ರಾಜ್ಯವ್ಯಾಪ್ತಿ ಹೊಂದಿರುವ ಏಕೈಕ ಸಂಸ್ಥೆಯಾಗಿದೆ. 67 ವರ್ಷಗಳ ಇತಿಹಾಸದೊಂದಿಗೆ 8300 ಕ್ಕೂ ಹೆಚ್ಚು ಸದಸ್ಯರ ಮತ್ತು 110 ಸಂಯೋಜಿತ ಸಂಘಗಳ ಸದಸ್ಯತ್ವ ಹೊಂದಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News