×
Ad

ಬಿಎಸ್‌ವೈ ಡಿನೋಟಿಫೈ ಮಾಡಲು ಆದೇಶಿಸಿದ್ದ ಹೇಳಿಕೆ ಕಾನೂನು ಪ್ರಕಾರ ಸಿಂಧುವಾಗಿಲ್ಲ: ಹಿರಿಯ ವಕೀಲ ಹೈಕೋರ್ಟ್‌ಗೆ ಹೇಳಿಕೆ

Update: 2017-09-15 21:55 IST

ಬೆಂಗಳೂರು, ಸೆ.15: ಶಿವರಾಮ ಕಾರಂತ ಬಡಾವಣೆಯ ಅಕ್ರಮ ಡಿನೋಟಿಫಿಕೇಷನ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ಕುರುಡ ಕತ್ತಲ ಕೋಣೆಯಲ್ಲಿ ಕರಿಬೆಕ್ಕು ಹುಡುಕಿದಂತಿದೆ ಎಂದು ಹಿರಿಯ ವಕೀಲ ಸಿ.ವಿ.ನಾ  ಗೇಶ್ ಹೈಕೋರ್ಟ್‌ಗೆ ಹೇಳಿದರು.

ನನ್ನ ವಿರುದ್ಧ ಎಸಿಬಿಯಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಯಡಿಯೂರಪ್ಪ ಅವರ ಪರ ವಾದ ಮುಂದುವರಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಯಾವುದೇ ದೂರು ದಾಖಲಿಸಬೇಕಾದರೆ ಅದನ್ನು ಪುಷ್ಟೀಕರಿಸುವ ಸಾಕ್ಷ್ಯ ಇರಬೇಕು. ಎಲ್ಲಿ, ಯಾವಾಗ, ಹೇಗೆ ಮತ್ತು ಯಾವ ರೀತಿ ಅಪರಾಧ ನಡೆದಿದೆ ಎಂಬ ಬಗ್ಗೆ ಅಗತ್ಯ ಪುರಾವೆಗಳನ್ನು ಪ್ರಾಸಿಕ್ಯೂಷನ್‌ಗೆ ಒದಗಿಸಬೇಕು. ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಸಾಕ್ಷವನ್ನು ನೀಡಿಲ್ಲ ಎಂದರು.

ಅಷ್ಟಕ್ಕೂ ಈ ಪ್ರಕರಣದಲ್ಲಿ ಯಡಿಯೂರಪ್ಪಡಿನೋಟಿಫೈ ಮಾಡಲು ಆದೇಶಿಸಿದ್ದಾರೆ ಎಂದು ಹೇಳುತ್ತಿರುವುದು ಕಾನೂನು ಪ್ರಕಾರ ಸಿಂಧುವಾಗುವುದಿಲ್ಲ. ಏಕೆಂದರೆ ಇಂತಹ ಆದೇಶಗಳು ಅಧಿಸೂಚನೆಯಾಗಿ ಹೊರಬಿದ್ದಾಗ ಮಾತ್ರವೇ ಅವುಗಳ ಸಿಂಧುತ್ವ ಕಾನೂನು ಬದ್ಧತೆ ಪಡೆಯುತ್ತವೆ ಎಂದರು.

OBTAIN   OBTAIN  ಇಂಗ್ಲಿಷ್‌ನ ಎಂಬ ಪದಕ್ಕೆ ಕನ್ನಡದಲ್ಲಿ ಪಡೆದು ಎಂದು ಎಸಿಬಿ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿ ಲಂಚ ಅಥವಾ ಲಾಭ ಪಡೆದಿದ್ದಾನೆ. ಹೀಗಾಗಿ, ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಬರುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ತಪ್ಪು.  ಎಂಬುದಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಅಂತಹ ಲಾಭ ಪಡೆಯಲು ಆರೋಪಿ ಬೇಡಿಕೆ ಇಟ್ಟಿರಬೇಕು ಅಥವಾ ಮನವಿ ಮಾಡಿರಬೇಕು. ಆದರೆ, ಇಲ್ಲಿ ಅಂತಹ ಯಾವುದೇ ಬೇಡಿಕೆ ಯಾ ಮನವಿ ಸಲ್ಲಿಸಲಾಗಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News