ಸುಗ್ರೀವಾಜ್ಞೆಗೆ ಅಂಕಿತ ಹಾಕಲು ದಸಂಸ ಆಗ್ರಹ
Update: 2017-09-16 19:49 IST
ಬೆಂಗಳೂರು, ಸೆ.16: ನಗರದ ಆನಂದ ರಾವ್ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ನೇತೃತ್ವದಲ್ಲಿ ಪರಿಶಿಷ್ಟರ ಭಡ್ತಿ ಮೀಸಲಾತಿ ಸಂಬಂಧದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಬೇಕೆಂದು ಆಗ್ರಹಿಸಿ ಧರಣಿ ನಡೆಸಲಾಯಿತು.
ಈ ವೇಳೆ ಚಿಂತಕ ಮಂಗ್ಳೂರು ವಿಜಯ, ಪ್ರೊ.ನರಸಿಂಹಯ್ಯ, ಮುಖಂಡರಾದ ಜೀವನಹಳ್ಳಿ ವೆಂಕಟೇಶ್, ಕಲ್ಲಪ್ಪ ಕಾಂಬ್ಳೆ, ಕೆಂಪಣ್ಣ ಸಾಗ್ಯ, ತರೀಕೇರೆ ನಾಗರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.