ಸ್ಟೀವ್ ಮ್ಯಾಕ್ ಕರ್ರಿ

Update: 2017-09-16 18:58 GMT
ಸ್ಟೀವ್ ಮ್ಯಾಕ್ ಕರ್ರಿ 

ಬಣ್ಣದ ಛಾಯಾಚಿತ್ರಗಳೆಂದರೆ ತಕ್ಷಣ ಮನಸ್ಸಿಗೆ ಬರು ವುದು ಸ್ಟೀವ್ ಮ್ಯಾಕ್ ಕರ್ರಿ ಅವರ ಚಿತ್ರಗಳು. ಬಣ್ಣಗಳೊಂದಿಗೆ ಒಂದು ಚಿತ್ರವನ್ನು ಸಂಯೋಜಿಸುವ ಅತ್ಯುತ್ತಮ ಉದಾಹರಣೆಗೆ ಸ್ಟೀವ್ ಅವರ ಚಿತ್ರಗಳಲ್ಲಿ ತೋರುತ್ತದೆ. ಬೆಳಕು-ಬಣ್ಣಗಳನ್ನು ಒಂದು ಕ್ಷಣದ ತೀವ್ರತೆಯನ್ನು, ಸೂಕ್ಷ್ಮ ವಿವರಗಳನ್ನು ಒಟ್ಟಿಗೆ ತರಬಲ್ಲ ಛಾಯಾಗ್ರಾಹಕ ಸ್ಟೀವ್. ಮೂಲತಃ ಅಮೆರಿಕದವರಾದ ಇವರು, ತಮ್ಮ ಛಾಯಾಗ್ರಹಣ ವನ್ನು ಪತ್ರಿಕೋದ್ಯಮದಲ್ಲಿ ಪ್ರಾರಂಭಿಸಿದರು. ನಂತರ ಜಗತ್ತಿನಾದ್ಯಂತ ಯುದ್ಧಗಳಿಂದ ಹಿಡಿದು ಫಿಲಿಫೀನ್ಸ್ ಗಾರ್ಮೆಂಟ್ ಫ್ಯಾಕ್ಟರಿಗಳು, ಬೌದ್ಧ ಭಿಕ್ಕುಗಳ ಆಧ್ಯಾತ್ಮಿಕ ಪಠಣ -ಹೀಗೆ ಸ್ಟೀವ್ ಬದುಕಿನ ಅನೇಕ ಚಹರೆಗಳನ್ನು ಒಂದು ಮಹಾಧ್ಯಾನ ದಂತೆ ತೆಗೆಯುತ್ತಾ ಹೋದರು.

1984ರಲ್ಲಿ ಪಾಕಿಸ್ತಾನದ ಪೇಶಾವರದಲ್ಲಿ ಒಂದು ಅಫ್ಘಾನ್ ಹುಡುಗಿಯ ಚಿತ್ರವನ್ನು ತೆಗೆದರು. ಇದು ಅವರ ಚಿತ್ರಗಳೆಲ್ಲದ್ದಕ್ಕೂ ಒಂದು ಮುಖಪುಟ ವಾಗುವಂತಷ್ಟು ಜನಪ್ರಿಯವಾಯಿತು. ‘The Afghan girl’ ಆಗಿನ ಅಫ್ಘಾನಿಸ್ತಾದಲ್ಲಾಗುತ್ತಿದ್ದ ತಲ್ಲಣಗಳನ್ನು ಚಿತ್ರಿಸಿತು.

ಇರಾನ್-ಇರಾಕ್ ಯುದ್ಧ, ಲೆಬನಾನ್ ಸಿವಿಲ್ ವಾರ್, ಕಾಂಬೋಡಿಯಾದ ಸಿವಿಲ್ ವಾರ್, ಫಿಲಿಪೀನ್ಸ್‌ನ ಇಸ್ಲಾಮಿಕ್ ದಂಗೆ, ಗಲ್ಫ್‌ವಾರ್, ಅಫ್ಘಾನ್ ಸಿವಿಲ್ ವಾರ್.... ಹೀಗೆ ಪ್ರಸ್ತುತ ಜಗತ್ತಿನ ಅನೇಕ ಬಹು ಮುಖ್ಯ ತಲ್ಲಣಗಳನ್ನು ಸ್ಟೀವ್ ದಾಖಲಿಸಿದ್ದಾರೆ. ಫೋಟೊಗ್ರಾಫರ್ ಒಬ್ಬರ ಗ್ರಹಿಕೆ ಹಾಗೂ ಸೂಕ್ಷ್ಮತೆ ಹೇಗಿರಬೇಕೆಂಬ ಬಗ್ಗೆ ಸ್ಟೀವ್ ಹೇಳುವುದು ಹೀಗಿದೆ.

ನಮ್ಮ ಬಹುಮುಖ್ಯ ಗಮನ ಸದಾ ಮನುಷ್ಯನ ಮುಖದ ಮೇಲೆ ಇರುತ್ತದೆ. ಪ್ರಜ್ಞಾ ಪೂರಕವಲ್ಲದ ಒಬ್ಬ ವ್ಯಕ್ತಿಯ ಅಂತರಂಗವು ಕ್ಷಣಮಾತ್ರದಲ್ಲಿ ಹೊರ ಚಿಮ್ಮುವ ಆ ಸಮಯಕ್ಕಾಗಿ ನಾನು ಕಾದಿರುತ್ತೇನೆ. ಆ ವ್ಯಕ್ತಿಯ ಅನುಭವವೇ ಅವನ ಮುಖದ ಮೇಲೆ ಕೆತ್ತಿರುವಂತಿರುತ್ತದೆ. ಆ ಕ್ಷಣ ವಿಶಾಲವಾದ ಒಂದು ಪ್ರದೇಶದೊಳಗಿನ ಒಂದು ಸನ್ನಿವೇಶದಲ್ಲಿ ಸಿಲುಕಿರುವ ಮನುಷ್ಯನನ್ನು ನಾನು ಚಿತ್ರಿಸಲು ಯತ್ನಿಸುತ್ತೇನೆ... ‘Human condition’ ಅನ್ನುತ್ತಾರಲ್ಲಾ ಅದೇ ನನಗೆ ಮುಖ್ಯ ಎಂದೆನ್ನುತ್ತಾರೆ ಸ್ಟೀವ್ ಮ್ಯಾಕ್‌ಕರ್ರಿ.

Writer - ಉಷಾ .ಬಿ.ಎನ್.

contributor

Editor - ಉಷಾ .ಬಿ.ಎನ್.

contributor

Similar News