ಹೆಡಿ ಲಾಮಾರ್ರ್‌: ವೈರ್‌ಲೆಸ್ ಕಮ್ಯುನಿಕೇಶನ್‌ನ ಹರಿಕಾರ್ತೆ

Update: 2017-09-17 10:49 GMT

ಮೊಬೈಲ್ ತಂತ್ರಜ್ಞಾನ ತಂದ ಸಾಮಾಜಿಕ ಬದಲಾವಣೆ ಈಗ ಎಲ್ಲರ ಕಣ್ಣ ಮುಂದಿದೆ. ಸರಳವಾಗಿ ಹೇಳಬೇ ಕೆಂದರೆ, ರೇಡಿಯೋ ಗ್ರಾಹಕ ಮತ್ತು ಪ್ರಸಾರಕಗಳೆರಡೂ ಒಂದೇ ಉಪಕರಣದಲ್ಲಿದ್ದು ಚಲನ ಸ್ಥಿತಿಯಲ್ಲಿ ಸಂವಹನೆಗೆ ನೆರವಾದರೆ, ಅದನ್ನು ಮೊಬೈಲ್/ಸೆಲ್ಯುಲರ್ ಕಮ್ಯುನಿಕೇಶನ್‌ನ ಅಂಗವಾಗಿ ಪರಿಗ ಣಿಸಿದರೆ, ಅದನ್ನು ಮೊಬೈಲ್ ತಂತ್ರಜ್ಞಾನ ಎಂದು ತಿಳಿಯಬಹುದು. ಚಲನ ಸ್ಥಿತಿಯಲ್ಲಿ ರುವುದರಿಂದ, ಕಾರ್ಯ ನಿರ್ವಹಿಸಲು ಈ ಉಪಕರಣಗಳು ಬ್ಯಾಟರಿಯ ಮೇಲೆ ಅವಲಂಬಿತವಾಗಿರುತ್ತವೆ. ಅಲ್ಲದೆ ಸಂವಹನೆ ಗಾಗಿ ರೇಡಿಯೋ ಅಲೆಗಳನ್ನು ಬಳಸುತ್ತವೆ. ಮೊಬೈಲ್ ಉಪಕರಣಗಳ ಪ್ರತಿಯೊಂದು ಭಾಗವು ಕಾಲಾನುಕ್ರಮದಲ್ಲಿ ಪರಿಷ್ಕೃತಗೊಂಡು ಉತ್ತಮ ತಂತ್ರಜ್ಞಾನಕ್ಕಾಗಿ ಉದಾಹರಣೆಯಾಗಿ ನಿಂತಿವೆ. ಈ ಬೆಳವಣಿಗೆಯ ಹಿಂದೆ ಹಲವಾರು ವಿಜ್ಞಾನಿಗಳು ಮತ್ತು ತಂತ್ರಜ್ಞರು ಇದ್ದಾರೆ. ಇವರಲ್ಲೆಲ್ಲ ಹೆಚ್ಚು ಗಮನ ಸೆಳೆಯುವ ಹೆಸರು ಹೆಡಿ ಲಾಮಾರ್ರ್‌. ಈಕೆ ಸಂವಹನ ತಂತ್ರಜ್ಞತೆಯಲ್ಲಿ ಹೆಸರು ಮಾಡಿದ ಮಹಿಳೆ. ಹೆಡಿಯ ಕೊಡುಗೆಯನ್ನು ತಿಳಿಯಲು ಮೊಬೈಲ್ ತಂತ್ರಜ್ಞಾನದ ಒಂದು ಪ್ರಮುಖ ಅಂಶವನ್ನು ಅರಿಯಬೇಕು.

                   ಚಿತ್ರ (1)

  ಮೊಬೈಲ್/ಸೆಲ್ಯುಲರ್ ತಂತ್ರಜ್ಞಾನಕ್ಕಾಗಿ ಬಳಸುವ ರೇಡಿಯೊ ಅಲೆಗಳ ಆವರ್ತನಾಂಕಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಗ್ರಾಹಕರ ಸಂಖ್ಯೆ ಅತೀ ಹೆಚ್ಚು. ಅಲ್ಲದೆ, ನಿಸ್ತಂತು ಸಂವಹನೆಯಾದ್ದರಿಂದ ರೇಡಿಯೋ ಸಂಕೇತಗಳು ಕ್ಷೀಣಗೊಂಡು, ಬೇರೆ ಸಂಕೇತಗಳೊಡನೆ ಬೆರೆತು ಕಳೆದುಹೋಗುವ ಸಾಧ್ಯತೆಗಳು ಬಹಳ ಹೆಚ್ಚು. ಇದಕ್ಕಾಗಿ ಬಳಸುವ ರೇಡಿಯೋ ಅಲೆಗಳನ್ನು ಒಂದು ವ್ಯಾಪ್ತಿಯ ಹೊರಗೆ ಮರು ಬಳಸುವಂತೆ ಮಾಡುತ್ತಾರೆ. ಈ ವ್ಯಾಪ್ತಿಯನ್ನು ಸೆಲ್ ಎಂದು ಕರೆಯುತ್ತಾರೆ. ಸೆಲ್‌ನಲ್ಲಿ ಬಳಸಲು ಸಿಗುವ ಆವರ್ತನಾಂಕಗಳನ್ನು ಹೆಚ್ಚು ಗ್ರಾಹಕರಿಗೆ ದೊರೆಯುವಂತೆ ಮಾಡಲು ಮತ್ತು ಸಂಕೇತಗಳು, ಸಂಕೇತಗಳಲ್ಲಿರುವ ಮಾಹಿತಿ ಕಳೆದು ಹೋಗದಂತೆ ಮಾಡಲು ಎರಡು ವಿಭಿನ್ನ ರೀತಿಯ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಒಂದು ಆವರ್ತನಾಂಕಗಳ ಜಿಗಿತ (Frequency Hopping) ಮತ್ತೊಂದು ಅಲೆಗಳ ವಿಸ್ತರಿಕೆ ಚಿತ್ರ-1(Spread Speetrum)

                          ಚಿತ್ರ (2)

 ಅಲೆಗಳ ವಿಸ್ತರಿಕೆಯ ವಿಧಾನದಲ್ಲಿ ನಿರ್ದಿಷ್ಟ ಆವರ್ತನಾಂಕ ಗಳನ್ನು ವಿಸ್ತರಿಸಲು Pseudo Random ಕೋಡ್‌ಗಳನ್ನು ಬಳಸಲಾಗುತ್ತದೆ. ಚಿತ್ರ 1ರಲ್ಲಿ ಕಾಣುವಂತೆ, ಕಿರಿದಾದ ವ್ಯಾಪ್ತಿಯಲ್ಲಿ ರುವ ಸಂಕೇತಗಳನ್ನು, ರ್ಯಾಂಡಮ್ ಸಂಕೇತಗಳೊಡನೆ ಸಂಸ್ಕರಿಸಿ ದಾಗ, ವಿಸ್ತೃತಗೊಂಡು ಕ್ಷೀಣವಾಗುತ್ತದೆ. ಆದರೆ ಸಂಕೇತಗಳು ಮರೆ ಯಾಗುವುದಿಲ್ಲ. ರೇಡಿಯೋ ಗ್ರಾಹಕದಲ್ಲಿ ಅದೇ ರ್ಯಾಂಡಮ್ ಸಂಕೇತಗಳೊಂದಿಗೆ ವಿರುದ್ಧ ರೀತಿಯಲ್ಲಿ ಸಂಸ್ಕರಿಸಿದಾಗ ಸಂಕೇತಗಳು ಹೊರಬರುತ್ತವೆ. ಸಾಮಾನ್ಯವಾಗಿ ಈ ರೀತಿಯವಿಧಾನವನ್ನು ಹಿಂದಿನ ಕಾಲದಲ್ಲಿ ಯುದ್ಧದ ಸಮಯದಲ್ಲಿ ಬಳಸುತ್ತಿದ್ದರು.

           ಚಿತ್ರ (3)

 ಹೆಡಿ ಲಾಮಾರ್ರ್‌ (ಚಿತ್ರ-2) 1913ರ ನವೆಂಬರ್ 9 ರಂದು ಆಸ್ಟ್ರಿಯಾದ ವಿಯೆನ್ನಾ ದಲ್ಲಿ ಹುಟ್ಟಿ ಬೆಳೆದರು. ನಾಝಿಗಳ ಬಗ್ಗೆ ಸಹಾ ನುಭೂತಿಯನ್ನು ಹೊಂದಿದ್ದ ಫ್ರಿಜ್ ಮಾಂಡ್ಲ್ ಎಂಬ ಕೋಟ್ಯಾಧಿಪತಿಯನ್ನು ಮದುವೆ ಯಾಗಿ ಆ ನಂತರ ಅಮೆರಿಕದ ಹಾಲಿವುಡ್ ಚಿತ್ರ ನಿರ್ದೇಶಕ ಲೂಯಿ ಪಿ.ಬಿ. ಮೇಯರ್‌ರನ್ನು ಮದುವೆಯಾಗಿದ್ದರು. ಮಾಂಡ್ಲ್ ಜೊತೆಗಿನ ಸಮಯದಲ್ಲಿ ನಾಝಿಗಳ ಯುದ್ಧ ವಿಧಾನಗಳ ಬಗ್ಗೆ ಅರಿತ ಆಕೆ, ಅಮೆರಿಕದಲ್ಲಿದ್ದಾಗ ಅವರ ವಿರುದ್ಧ ಎರಡನೆ ಮಹಾಯುದ್ಧದ ಸಮಯದಲ್ಲಿ ಅಲೆಗಳ ವಿಸ್ತರಿಕೆಯ ವಿಧಾನವನ್ನು ಸಹಯೋಗಿ ಮತ್ತು ಸಂಗೀತ ನಿರೂಪಕರಾದ ಜಾರ್ಜ್ ಆಂತೀಲ್ ಅವರೊಂದಿಗೆ ಸೇರಿ ಕಂಡುಹಿಡಿದರು. ಸ್ವದೇಶದ ಮೇಲಿನ ಅಭಿಮಾನವೋ ಅಥವಾ ನಾಜಿಗಳ ಬಗೆಗಿನ ಹಗೆಯ ಕಾರಣವಾಗಿಯೋ, ಹೆಡಿ ಕೌತುಕದಿಂದ ಅಧ್ಯಯನ ಮಾಡಿ ಈ ವಿಧಾನವನ್ನು ಪರಿಚಯಿಸಿದ್ದು ಅಷ್ಟೊಂದು ಪ್ರಸಿದ್ಧಿ ಪಡೆಯಲಿಲ್ಲ. ಆಗ ಆಕೆಯ ಸೌಂದರ್ಯ, ಪ್ರತಿಭೆಯನ್ನು ಮರೆಮಾಚಿತ್ತು. 1990 ನಂತರ ಬೆಳೆದ ಮೊಬೈಲ್ ತಂತ್ರಜ್ಞಾನದಲ್ಲಿ ಬಳಸಲಾದ ಆಕೆಯ ವಿಧಾನ, ಈಗ ವಿಶ್ವಾದ್ಯಂತ ಬಳಕೆಯಾಗುತ್ತಿದೆ. Wi-Fi, WLAN ಹೀಗೆ ಹಲವಾರು ಕ್ಷೇತ್ರಗಳಲ್ಲೂ ಬಳಸಲಾಗುತ್ತಿದೆ. ಈಗಲೂ ಆಕೆ ಈ ವಿಧಾನದ ಪೇಟೆಂಟ್ ಅನ್ನು ಹೊಂದಿದ್ದಾರೆ. ಚಿತ್ರ-3. ಜಾಗೃತ ವಿಶ್ವದ ಸೌಂದರ್ಯ, ಪ್ರತಿಭೆ ಮತ್ತು ಸ್ವದೇಶ ಪ್ರೇಮದ ಪ್ರತೀಕವಾದ ಹೆಡಿ ಲಾಮಾರ್ರ್‌ 21ನೆ ಶತಮಾನದ ಪ್ರಮುಖ ಮಹಿಳಾ ಅನ್ವೇಷಕಿ. ಆಧುನಿಕ ಮಹಿಳೆಯರಿಗೆ ಒಂದು ಸ್ಫೂರ್ತಿಯ ಚೇತನ. ಜನವರಿ 19, 2000 ರಂದು 85 ನೆಯ ವಯಸ್ಸಿನಲ್ಲಿ ಹಲವಾರು ಹೃದಯದ ತೊಂದರೆಗಳಿಂದ ಬಳಲಿ ಹೆಡಿ ಲಾಮಾರ್ರ್‌ ರವರು ಕೊನೆಯುಸಿರೆಳೆದರು.

Writer - ಪ್ರಭಾವತಿ.ಪಿ,

contributor

Editor - ಪ್ರಭಾವತಿ.ಪಿ,

contributor

Similar News