ಇಇಸಿಎ ಎಕ್ಸ್‌ಪೋ-2017 ಪ್ರದರ್ಶನಕ್ಕೆ ಚಾಲನೆ

Update: 2017-09-19 17:57 GMT

ಬೆಂಗಳೂರು, ಸೆ. 19: ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಇಇಸಿಎ ಎಕ್ಸಪೋ-2017 ಪ್ರದರ್ಶನಕ್ಕೆ ಆಟೋಮೊಬೈಲ್ ಸೊಸೈಟಿ ಆಫ್ ಇಂಡಿಯಾ ಮುಖ್ಯಸ್ಥ ಮನೀಷ್ ಮಾಧವನ್ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಹಲವಾರು ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಆಟೋಮೊಬೈಲ್ ಉಪಕರಣಗಳ ಮತ್ತು ಬಿಡಿಭಾಗಗಳ ಉತ್ಪಾದನೆಯಲ್ಲಿ ಭಾರಿ ಏರಿಕೆ ಕಂಡಿದೆ. ದೇಶದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗಿದೆ. ಈ ಹೊಸ ತಂತ್ರಜ್ಞಾನದ ಉಪಕರಣಗಳ ಬಳಕೆ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕಿದೆ ಎಂದರು.

ಪ್ರದರ್ಶನದಲ್ಲಿ ಭಾರತೀಯ ಆಟೋ ಮೊಬೈಲ್ ಕೈಗಾರಿಕಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು, ವಾಹನ ಸುರಕ್ಷತೆ, ನೇವಿಗೇಶನ್, ರಸ್ತೆ ಸುರಕ್ಷತೆ ಮತ್ತಿತರ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ. ಈ ಪ್ರದರ್ಶನದಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಆಟೋ ಮೊಬೈಲ್ ಬಿಡಿ ಭಾಗಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ವರಿಸಿದರು.

ಮೇಳದಲ್ಲಿ ಆಟೋ ಮೊಬೈಲ್‌ಗೆ ಸಂಬಂಧಿಸಿದ ಬಿಡಿ ಭಾಗಗಳು, ದುಭಾರಿ ಬೈಕ್‌ಗಳು, ಎಲೆಕ್ಟ್ರಿಕ್ ಸ್ಟಾಂಡ್, ಟ್ಯೂಬ್‌ಲೆಸ್ ರಬ್ಬರ್ ಟೈಯರ್, ಇತರೆ ಬಿಡಿಭಾಗಗಳನ್ನು ಪ್ರರ್ದಶನ ಮತ್ತು ಮಾರಾಟಕ್ಕಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News