ಸೆ.21 ರಿಂದ ‘ಜಿಜ್ಞಾಸ ದರ್ಶನ’ ರಾಷ್ಟ್ರೀಯ ವಿಚಾರ ಸಂಕಿರಣ

Update: 2017-09-19 18:03 GMT

ಬೆಂಗಳೂರು, ಸೆ.19: ಆಯುರ್ವೇದದಲ್ಲಿ ಶಿಕ್ಷಣ ಮತ್ತು ತರಬೇತಿಯಲ್ಲಿ ಸುಧಾರಣೆಗಾಗಿ ಎಬಿವಿಪಿ ವತಿಯಿಂದ ‘ಜಿಜ್ಞಾಸ ದರ್ಶನ’ ಎಂಬ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಸೆ.21 ಮತ್ತು 22 ರಂದು ನಗರದ ಗಾಂಧಿ ಭವನದದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಜ್ಞಾಸ ದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ, ಪ್ರಸಕ್ತ ದಿನಗಳಲ್ಲಿ ಆಯುರ್ವೇದ ಶಿಕ್ಷಣ ಮತ್ತು ತರಬೇತಿಯಲ್ಲಿರುವ ರಚನಾತ್ಮಕ ಮತ್ತು ಕ್ರಿಯಾತ್ಮಕ ಅಂಶಗಳ ಕುರಿತು ವಿಮರ್ಶೆ, ಅಸಂಘಟಿತ ಸಾಂಪ್ರದಾಯಿಕ ಆಯುರ್ವೇದ ಪದ್ದತಿಗಳ ಏಕೀಕರಣ, ಆಯುರ್ವೇದ ಶಿಕ್ಷಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಪಠ್ಯಕ್ರಮದಲ್ಲಿ ಇತರ ಭಾರತೀಯ ಶಾಸ್ತ್ರದ ಅಧ್ಯಯನ ಮತ್ತು ವ್ಯಾಪ್ತಿ ಹಾಗೂ ಸಮಕಾಲೀನ ಗುರುಕುಲ ಪದ್ಧತಿಯ ಕಾರ್ಯವಿಧಾನಗಳ ಕುರಿತು ವಿಷಯ ಮಂಡನೆ ಮತ್ತು ಚರ್ಚೆಗಳು ನಡೆಯಲಿವೆ ಎಂದರು.

ಸಮ್ಮೇಳನವನ್ನು ಪದ್ಮಶ್ರೀ ವೈ.ರಾಜೇಶ ಕೊಟೆಚಾ, ಡಾ.ಪಿ.ಆರ್.ಕೃಷ್ಣಕುಮಾರ್, ಪ್ರೊ.ವೈ.ಕೆ.ಎಸ್.ಧೀಮಾನ್, ಡಾ.ಅಹಲ್ಯ ಶರ್ಮ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News