×
Ad

ಬೆಂಗಳೂರು: ಸರಗಳ್ಳತನ

Update: 2017-09-20 19:43 IST

ಬೆಂಗಳೂರು, ಸೆ.20: ವಾಯುವಿಹಾರ ಮಾಡುತ್ತಿದ್ದ ಮಹಿಳೆ ಹಿಂಬಾಲಿಸಿ ಬಂದ ದರೋಡೆಕೋರ ಕೊರಳಿಗೆ ಕೈ ಹಾಕಿ 112 ಗ್ರಾಂ ತೂಕದ ಎರಡು ಸರಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳವಾರ ಸಂಜೆ 7 ಗಂಟೆಯಲ್ಲಿ ಶೃತಿ ಎಂಬುವರು ಬಿ.ನಾರಾಯಣಪುರ ಕೆರೆ ಬಳಿ ಮಗುನೊಂದಿಗೆ ವಾಯುವಿಹಾರ ಮಾಡುತ್ತಿದ್ದಾಗ ದರೋಡೆಕೋರ ಹಿಂದಿನಿಂದ ಬಂದು ಮೂರು ಲಕ್ಷ ರೂ. ಬೆಲೆ ಬಾಳುವ ಎರಡು ಸರಗಳನ್ನು ಅಪಹರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಮಹಾದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News