ವಾಹನ ಕಳವು ಪ್ರಕರಣ: ಇಬ್ಬರ ಬಂಧನ
Update: 2017-09-20 19:47 IST
ಬೆಂಗಳೂರು, ಸೆ.20: ವಾಹನ ನಿಲುಗಡೆ ಸ್ಥಳಗಳಿಂದ ಬೈಕ್‌ಗಳ ಹ್ಯಾಂಡ್‌ಲಾಕ್ ಮುರಿದು ಹಾಗೂ ವೈರ್ ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 2.68 ಲಕ್ಷ ರೂ. ಬೆಲೆ ಬಾಳುವ ಏಳು ಬೈಕ್ ಹಾಗೂ ಒಂದು ಆಟೊ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಡಿ.ಜೆ.ಹಳ್ಳಿಯ ಝಮೀರ್‌ವುದ್ದೀನ್(20), ಸೈಯದ್ ಇಮ್ರಾನ್ ಖಾನ್(19) ಎಂದು ಪೊಲೀಸರು ತಿಳಿಸಿದ್ದಾರೆ.