ಏಷ್ಯನ್ ಒಳಾಂಗಣ ಗೇಮ್ಸ್: ಭಾರತಕ್ಕೆ 1 ಚಿನ್ನ,2 ಕಂಚು

Update: 2017-09-20 18:37 GMT

ಅಶ್ಗಾಬಾಟ್, ಸೆ.20: ಇಲ್ಲಿ ನಡೆಯುತ್ತಿರುವ 5ನೆ ಆವೃತ್ತಿಯ ಏಷ್ಯನ್ ಇಂಡೋರ್ ಮತ್ತು ಮಾರ್ಷಲ್ ಆರ್ಟ್ಸ್ ಗೇಮ್ಸ್‌ನ ಐದನೆ ದಿನವಾಗಿರುವ ಬುಧವಾರ ಭಾರತ 1 ಚಿನ್ನ ಮತ್ತು 2 ಕಂಚು ಜಯಿಸಿದೆ. ಅಜಯ್ ಕುಮಾರ್ ಸರೋಜ್ 1,500 ಮೀಟರ್ ಓಟದಲ್ಲಿ 3 ನಿಮಿಷ ಮತ್ತು 48.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ನೇಹಾ ಸೋಲಂಕಿ ಮತ್ತು ಜ್ಯೋತಿ ವನಿತೆಯರ ಕುರಷ್( 87 ಕೆ.ಜಿ ಮೇಲ್ಪಟ್ಟ ವಿಭಾಗ) ನಲ್ಲಿ ಕಂಚು ಪಡೆದಿದ್ದಾರೆ. ಭಾರತ ಈ ವರೆಗೆ ಕೂಟದಲ್ಲಿ 4 ಚಿನ್ನ, 2 ಬೆಳ್ಳಿ ಮತ್ತು 4 ಕಂಚು ಪಡೆದಿದೆ. 15 ವಿವಿಧ ಸ್ಪರ್ಧೆಗಳಲ್ಲಿ ಭಾರತದ 200ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News