ಎರಡನೆ ಏಕದಿನ: ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ಕೆ

Update: 2017-09-21 09:06 GMT

ಕೋಲ್ಕತಾ,ಸೆ.21: ಆಸ್ಟ್ರೇಲಿಯ ವಿರುದ್ಧ ಎರಡನೆ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಕೊಹ್ಲಿ ಆಸೀಸ್ ವಿರುದ್ಧದ ಸರಣಿಯಲ್ಲಿ ಸತತ ಎರಡನೆ ಬಾರಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಕೊಹ್ಲಿ ಸತತ ಮೂರನೆ ಬಾರಿ ಟಾಸ್ ಜಯಿಸಿದ್ದಾರೆ.
‘‘ಈಡನ್‌ಗಾರ್ಡನ್ಸ್ ಪಿಚ್‌ನಲ್ಲಿ ರಾತ್ರಿ ವೇಳೆ ಚೆಂಡು ಹೆಚ್ಚು ಚಲನೆಯಲ್ಲಿರುತ್ತದೆ. ಪಿಚ್‌ನಲ್ಲಿ ಹೆಚ್ಚು ತೇವಾಂಶವಿರದ ಕಾರಣ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ’’ಎಂದು ಕೊಹ್ಲಿ ಹೇಳಿದ್ದಾರೆ.
ನಾನು ಟಾಸ್ ಜಯಿಸಿದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುತ್ತಿದ್ದೆ’’ ಎಂದು 100ನೆ ಏಕದಿನ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಆಸ್ಟ್ರೇಲಿಯ ತಂಡ ಎರಡು ಬದಲಾವಣೆ ಮಾಡಿದೆ. ಜೇಮ್ಸ್ ಫಾಕ್ನರ್ ಬದಲಿಗೆ ಕೇನ್ ರಿಚರ್ಡ್‌ಸನ್, ಲೆಗ್ ಸ್ಪಿನ್ನರ್ ಆಡಮ್ ಝಾಂಪ ಬದಲಿಗೆ ಎಡಗೈ ಸ್ಪಿನ್ನರ್ ಅಶ್ಟನ್ ಅಗರ್‌ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News