ರೋಹಿಂಗ್ಯ ಮುಸ್ಲಿಮರು ಅಕ್ರಮ ವಲಸಿಗರು: ರಾಜನಾಥ್ ಸಿಂಗ್

Update: 2017-09-21 10:05 GMT

ಹೊಸದಿಲ್ಲಿ,ಸೆ.21 : ರೋಹಿಂಗ್ಯ ಮುಸ್ಲಿಮರು ಅಕ್ರಮ ವಲಸಿಗರಾಗಿದ್ದಾರೆಯೇ ಹೊರತು ಭಾರತದಲ್ಲಿ ಆಶ್ರಯ ಅರಸಿ ಬಂದ ನಿರಾಶ್ರಿತರಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ  ಆಯೋಜಿಸಿದ್ದ ವಿಚಾರಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಗೃಹ ಸಚಿವರು, ಮ್ಯಾನ್ಮಾರ್ ಸ್ವತಃ ರೋಹಿಂಗ್ಯ ಮುಸ್ಲಿಮರನ್ನು ದೇಶದಲ್ಲಿ ಸೇರಿಸಿಕೊಳ್ಳಲು ಒಪ್ಪಿಕೊಳ್ಳದೇ ಇರುವಾಗ ಭಾರತ ಅವರನ್ನು ಹೊರಕ್ಕೆ ಕಳುಹಿಸುವುದಕ್ಕೆ ವಿರೋಧವೇಕೆ ಎಂದರು.

ರೋಹಿಂಗ್ಯನ್ನರು  ವಿಶ್ವಸಂಸ್ಥೆಯ ವಲಸಿಗರ ಸಮಾವೇಶ 1951ಕ್ಕೆ ಸಹಿ ಹಾಕಿಲ್ಲವಾದುದರಿಂದ ಅವರನ್ನು ದೇಶದಿಂದ ಗಡೀಪಾರು ಮಾಡಿದರೆ ಭಾರತ ಯಾವುದೇ ಅಂತಾರಾಷ್ಟ್ರೀಯ ಕಾನೂನುನ್ನು ಉಲ್ಲಂಘಿಸಿದಂತಾಗುವುದಿಲ್ಲ ಎಂದು ಸಚಿವರು ಅಭಿಪ್ರಾಯ ಪಟ್ಟರು.

ದೇಶದಲ್ಲಿಯೇ ಉಳಿಯಲು ಬಿಟ್ಟರೆ ಅವರು ಭಾರತೀಯರ ಪಾಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಕಡಿಮೆಗೊಳಿಸುವರಲ್ಲದೆ ಇದರಿಂದ ದೇಶವಾಸಿಗಳಿಗೂ ಅವರ ನಡುವೆಯೂ ವೈರತ್ವ ಉಂಟಾಗಿ ಕಾನೂನು ಸಮಸ್ಯೆ ಉಂಟಾಗಬಹುದೆಂದೂ ಸರಕಾರ ಸುಪ್ರೀಂ ಕೋರ್ಟಿನ ಮುಂದೆ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News