‘ಮಂಗಳೂರು ದಸರಾ’ಗೆ ಚಾಲನೆ

Update: 2017-09-21 10:37 GMT

ಮಂಗಳೂರು, ಸೆ.21: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಇಂದಿನಿಂದ 9 ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವ ‘ಮಂಗಳೂರು ದಸರಾ’ಗೆ ಇಂದು ಚಾಲನೆ ಸಿಕ್ಕಿದೆ.

ಮಂಗಳೂರು ದಸರಾ ಪ್ರಯುಕ್ತ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗಿರುವ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉದ್ಘಾಟನೆ ಮಾಡಿದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತ ಟಿ.ಆರ್. ಸುರೇಶ್, ‘‘ಮಂಗಳೂರು ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷಾಂತರ ಭಕ್ತರು ನಗರದಲ್ಲಿ ಸೇರುತ್ತಾರೆ. ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲೂ ಗಮನ ಹರಿಸಲಾಗಿದೆ’’ ಎಂದರು.

ಈ ಸಂದರ್ಭ ಮೇಯರ್ ಕವಿತಾ ಸನಿಲ್, ಎಸಿಪಿ ಉದಯ ನಾಯಕ್, ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಎಚ್.ಎಸ್.ಸಾಯಿರಾಂ, ರವಿಶಂಕರ್ ಮಿಜಾರ್, ಹರಿಕೃಷ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News