×
Ad

ಬೆಂಗಳೂರು: ಚಿನ್ನಾಭರಣ ಕಳವು

Update: 2017-09-21 20:30 IST

ಬೆಂಗಳೂರು, ಸೆ.21: ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕ ಉಪನಗರ ನಿವಾಸಿಯಾದ ವೆಂಕಟಪ್ಪರಾವ್(45) ಎಂಬುವರು ಯಲಹಂಕ ಉಪನಗರಕ್ಕೆ ಹೋಗಿ ಬುಧವಾರ ರಾತ್ರಿ 10ಗಂಟೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಇವರ ಹಿಂದಿನಿಂದ ಬಂದ ವ್ಯಕ್ತಿ ಬಸ್ ನಿಲ್ದಾಣ ಸಮೀಪ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News