×
Ad

ಕೆಎಸ್ಸಾರ್ಟಿಸಿಯಿಂದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್

Update: 2017-09-21 21:33 IST

ಬೆಂಗಳೂರು, ಸೆ. 21: ನಾಡಹಬ್ಬ ದಸರಾ ಮಹೋತ್ಸವದಲ್ಲಿ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರನ್ನು ವಿಸ್ಮಯಗೊಳಿಸಲಿರುವ ‘ಗಾಲಿಯ ಮೇಲೆ ಅರಮನೆ ದರ್ಶನ’(ಪ್ಯಾಲೇಸ್ ಅನ್‌ವ್ಹೀಲ್)ಕ್ಕೆ ಕೆಎಸ್ಸಾರ್ಟಿಸಿ ವಿಶೇಷ ಪ್ರವಾಸ ಪ್ಯಾಕೇಜ್ ಪ್ರಕಟಿಸಿದೆ.

ಪಾರಂಪರಿಕ ಕಟ್ಟಡ ದರ್ಶನ: ಅಂಬಾವಿಲಾಸ ಅರಮನೆ, ಜಗನ್ಮೋಹನ ಪ್ಯಾಲೇಸ್, ಲಲಿತಮಹಲ್ ಹೊಟೇಲ್, ವಸಂತಮಹಲ್, ಕಾರಂಜಿ ಅರಮನೆ, ಚೆಲುವರಾಜಮ್ಮಣ್ಣಿ ಅರಮನೆ ಜಯಲಕ್ಷ್ಮಿ ವಿಲಾಸ ಅರಮನೆ ವೀಕ್ಷಣೆ ಮಾಡಬಹುದು. ಇದರೊಂದಿಗೆ ಮೊದಲ ಬಾರಿಗೆ ನಗರದ ಪಾರಂಪರಿಕ ಕಟ್ಟಡಗಳು ಮತ್ತು ವಸ್ತು ಸಂಗ್ರಹಾಲಯಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದ್ದು, ಆ ಮೂಲಕ ನಗರದ ಪಾರಂಪರಿಕ ಕಟ್ಟಡಗಳನ್ನೂ ಪರಿಚಯಿಸಲಾಗುತ್ತಿದೆ.

ದರ-ಸೌಲಭ್ಯ: ಪ್ರವಾಸಕ್ಕೆ ಹೊರಡುವ ಹವಾನಿಯಂತ್ರಿತ ಬಸ್‌ನಲ್ಲಿ ಉಚಿತ ವೈಫೈ ಸೌಲಭ್ಯ, ನುರಿತ ಪ್ರವಾಸಿ ಗೈಡ್ ಇರಲಿದ್ದು, ಊಟ-ಉಪಾಹಾರ, ಸಂಚಾರ ಸಹಿತ ಟೂರ್ ಪ್ಯಾಕೇಜ್ ಇದಾಗಿದ್ದು, ಲಲಿತ್ ಮಹಲ್ ಪ್ಯಾಲೇಸ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಒಬ್ಬರಿಗೆ 999 ರೂ.ದರ ಹೊಂದಿದ್ದು, ಇದರಲ್ಲೂ ಕೌಟುಂಬಿಕ (ಫ್ಯಾಮಿಲಿ) ಮತ್ತು ವ್ಯಕ್ತಿಗತ (ಇಂಡ್ಯೂಜಿಯಲ್) ಎಂಬ ಎರಡು ಪ್ರತ್ಯೇಕ ಪ್ಯಾಕೇಜ್ ಇದೆ. ಆನ್‌ಲೈನ್ ಬುಕ್ಕಿಂಗ್ ಮಾಡಬಹುದು. ಹೆಚ್ಚಿನ ಮಾಹಿತಿಗೆ www.ksrtc.in ಗೆ ಲಾಗಿನ್ ಆಗಲು ಕೋರಲಾಗಿದೆ.

ಗಿರಿ ದರ್ಶಿನಿ: ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ-325 ಕಿ.ಮಿ, ಬೆಳಗ್ಗೆ 6.30ಕ್ಕೆ ಮೈಸೂರು ಬಸ್ ನಿಲ್ದಾಣದಿಂದ ಹೊರಡಲಿದೆ. ವಯಸ್ಕರಿಗೆ 350 ರೂ., ಮಕ್ಕಳಿಗೆ-175 ರೂ.ಗಳು ಎಂದು ತಿಳಿಸಲಾಗಿದೆ.

ಜಲ ದರ್ಶಿನಿ: ಗೋಲ್ಡನ್ ಟೆಂಪಲ್, ದುಬರೆ ಅರಣ್ಯ, ನಿಸರ್ಗಧಾಮ, ಅಬ್ಬೆ ಜಲಾಶಯ, ರಾಜಸೇಟ್, ಹಾರಂಗಿ ಅಣೆಕಟ್ಟು, ಕೆಆರ್‌ಎಸ್-350 ಕಿ.ಮೀ, ಬೆಳಗ್ಗೆ ಬೆಳಗ್ಗೆ 6.30ಕ್ಕೆ ಮೈಸೂರು ಬಸ್ ನಿಲ್ದಾಣದಿಂದ ಹೊರಡಲಿದ್ದು, ವಯಸ್ಕರು-375 ರೂ. ಹಾಗೂ ಮಕ್ಕಳಿಗೆ -190 ರೂ.ಗಳು.

ದೇವ ದರ್ಶಿನಿ:  ನಂಜನಗೂಡು, ತಲಕಾಡು, ಬ್ಲಫ್, ಮುಡ್ಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್-250 ಕಿ.ಮಿ, ಬೆಳಗ್ಗೆ 6.30ಕ್ಕೆ ಮೈಸೂರು ಬಸ್ ನಿಲ್ದಾಣದಿಂದ ಹೊರಡಲಿದ್ದು, ವಯಸ್ಕರು-275 ರೂ., ಮಕ್ಕಳಿಗೆ -140 ರೂ.ಗಳು ಸದರಿ ಪ್ಯಾಕೇಜ್ ಪ್ರವಾಸವು ಸೆ.22ರಿಂದ ಅಕ್ಟೋಬರ್ 2ರ ವರೆಗೆ ಕಾರ್ಯಾಚರಣೆಯಾಗಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News