ಈಡನ್‌ಗಾರ್ಡನ್ಸ್ ಬೆಲ್ ಬಾರಿಸಿದ ಸೆಹ್ವಾಗ್, ಗೋಸ್ವಾಮಿ

Update: 2017-09-21 18:35 GMT

ಕೋಲ್ಕತಾ, ಸೆ.21: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಭಾರತದ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಜುಲನ್ ಗೋಸ್ವಾಮಿ ಚಾರಿತ್ರಿಕ ಈಡನ್‌ಗಾರ್ಡನ್ಸ್‌ನಲ್ಲಿ ಬೆಲ್ ಬಾರಿಸುವ ಮೂಲಕ ಭಾರತ ಹಾಗೂ ಆಸ್ಟ್ರೇಲಿಯದ ನಡುವಿನ ದ್ವಿತೀಯ ಏಕದಿನ ಪಂದ್ಯಕ್ಕೆ ಚಾಲನೆ ನೀಡಿದರು. ಸೆಹ್ವಾಗ್ ಹಾಗೂ ಜುಲನ್ ಈಡನ್‌ಗಾರ್ಡನ್ಸ್‌ನಲ್ಲಿ ಬೆಲ್ ಬಾರಿಸುವುದರೊಂದಿಗೆ ಎರಡನೆ ಏಕದಿನದ ಆರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡಿತ್ತು. ಎಂಎಸ್ ಧೋನಿ ಭಾರತದ ಪರ 300ನೆ ಏಕದಿನ ಪಂದ್ಯ ಹಾಗೂ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯದ ಪರ 100ನೆ ಏಕದಿನ ಪಂದ್ಯವನ್ನಾಡಲಿದ್ದಾರೆ. ಪ್ರವಾಸಿ ಆಸ್ಟ್ರೇಲಿಯ ತಂಡ 2003ರ ಬಳಿಕ ಈಡನ್‌ಗಾರ್ಡನ್ಸ್‌ನಲ್ಲಿ ಮೊದಲ ಬಾರಿ 50 ಓವರ್‌ಗಳ ಪಂದ್ಯವನ್ನಾಡಿದೆ. 2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಸೆಹ್ವಾಗ್ 251 ಏಕದಿನಗಳಲ್ಲಿ 8,273 ರನ್ ಗಳಿಸಿದ್ದು ಇದರಲ್ಲಿ 15 ಶತಕ, 38 ಅರ್ಧಶತಕಗಳಿವೆ. ಮಹಿಳೆಯರ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿರುವ ಗೋಸ್ವಾಮಿ ಈವರೆಗೆ 164 ಏಕದಿನಗಳಲ್ಲಿ 195 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News