ಮನೆಯಲ್ಲೇ 'ಸ್ಪೈಸಿ' ಗಾರ್ಲಿಕ್ ಪೆಪ್ಪರ್ ಚಿಕನ್ ತಯಾರಿಸಿ: ಇಲ್ಲಿದೆ ಸರಳ ವಿಧಾನ

Update: 2017-09-22 09:57 GMT

ಗಾರ್ಲಿಕ್ ಪೆಪ್ಪರ್ ಚಿಕನ್

 ಪ್ರಮಾಣ: ನಾಲ್ವರಿಗೆ ಸಾಲುವಷ್ಟು

 ತಯಾರಿಕೆ ಸಮಯ:15-30 ನಿಮಿಷಗಳು

 ಬೇಕಾಗುವ ಸಾಮಗ್ರಿಗಳು:

 ಕೋಳಿಮಾಂಸ 750 ಗ್ರಾಂ

 ಎಣ್ಣೆ 60 ಎಂಎಲ್

 ನೀರುಳ್ಳಿ 200 ಗ್ರಾಂ

 ಬೆಳ್ಳುಳ್ಳಿ 2 ಎಸಳು

 ಮೆಣಸಿನ ಹುಡಿ ಒಂದು ಚಮಚ

 ಉಪ್ಪು ರುಚಿಗೆ ತಕ್ಕಷ್ಟು

 ಜೀರಿಗೆ ಅರ್ಧ ಚಮಚ

 ಕಾಳುಮೆಣಸು ಒಂದು ಚಮಚ

 ಅರಿಷಿಣ ಅರ್ಧ ಚಮಚ

  ಸಾಸಿವೆ ಅರ್ಧ ಚಮಚ

 ಕರಿಬೇವು 3-4 ಎಲೆ ಹೆಚ್ಚಿದ ಶುಂಠಿ ಒಂದು ಚಮಚ

ತಯಾರಿಸುವ ವಿಧಾನ:

ಕೋಳಿಮಾಂಸವನ್ನು ಚೆನ್ನಾಗಿ ತೊಳೆದು ತುಂಡುಗಳನ್ನಾಗಿ ಮಾಡಿ ಉಪ್ಪನ್ನು ಸವರಿ ಪಕ್ಕಕ್ಕಿಡಿ. ಅರಿಷಿಣ, ಮೆಣಸಿನ ಹುಡಿ, ಕಾಳುಮೆಣಸು, ಜೀರಿಗೆ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಮಿಕ್ಸರ್‌ನಲ್ಲಿ ತಿರುಗಿಸಿ ಮಸಾಲೆ ಸಿದ್ಧಗೊಳಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಬಳಿಕ ಹೆಚ್ಚಿದ ನೀರುಳ್ಳಿ, ಕರಿಬೇವಿನ ಎಲೆಗಳು ಮತ್ತು ಸಾಸಿವೆ ಹಾಕಿ ಹುರಿಯಿರಿ. ಐದು ನಿಮಿಷಗಳ ಬಳಿಕ ಮಸಾಲೆ ಮತ್ತು ಕೋಳಿಮಾಂಸದ ತುಂಡುಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ ದೊಡ್ಡ ಬೆಂಕಿಯಲ್ಲಿ 15ರಿಂದ 25 ನಿಮಿಷ ಇಟ್ಟರೆ ರುಚಿರುಚಿಯಾದ ಗಾರ್ಲಿಕ್ ಪೆಪ್ಪರ್ ಚಿಕನ್ ಸವಿಯಲು ಸಿದ್ಧ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News