ಸಚಿವ ಕೆ.ಜೆ.ಜಾರ್ಜ್‌ರಿಂದ ಮೆಟ್ರೋ ಕಾಮಗಾರಿ ವೀಕ್ಷಣೆ

Update: 2017-09-22 16:28 GMT

ಬೆಂಗಳೂರು, ಸೆ.22: ನಗರದ ಯಲಚೇನಹಳ್ಳಿ -ಅಂಜನಾಪುರದವರೆಗಿನ 6.29 ಕಿಮೀ ಉದ್ದದ ಮೆಟ್ರೋ ಕಾಮಗಾರಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದು ಪರಿಶೀಲನೆ ನಡೆಸಿದರು.

ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ ಶಿಪ್‌ವರೆಗೆ ಒಟ್ಟು 6ನಿಲ್ದಾಣಗಳು ನಿರ್ಮಾಣಗೊಳ್ಳಲಿದ್ದು, ಅಂಜನಾಪುರ ರೋಡ್ ಕ್ರಾಸ್‌ನಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣವನ್ನು ಸಚಿವ ಕೆ.ಜೆ.ಜಾರ್ಜ್ ಪರಿಶೀಲನೆ ನಡೆಸಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಅವರಿಂದ ಮಾಹಿತಿಯನ್ನು ಪಡೆದರು.

ಬಳಿಕ ತಾತಗುಣಿಯಲ್ಲಿರುವ ಕಾಸ್ಟಿಂಗ್ ಯಾರ್ಡ್ ಘಟಕಕ್ಕೂ ಭೇಟಿ ನೀಡಿದ ಸಚಿವರು, ಅಲ್ಲಿ ಸಿದ್ಧಪಡಿಸುತ್ತಿರುವ ಸಿಗ್ಮೆಂಟ್‌ಗಳನ್ನು ವೀಕ್ಷಿಸಿದರು. ರೀಚ್ 4ಬಿ ಮೆಟ್ರೋ ಮಾರ್ಗವು 509.2ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಒಟ್ಟು 73.95 ಕಿಮೀ ಉದ್ದವನ್ನು ಕ್ರಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News