ಅಕ್ರಮ ಗಾಂಜಾ ಮಾರಾಟ: ಮೂವರ ಬಂಧನ

Update: 2017-09-22 17:03 GMT

ಬೆಂಗಳೂರು, ಸೆ.22: ಹೆಚ್ಚಿನ ಹಣ ಸಂಪಾದನೆಗಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 1.5ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನಗರದ ತಂಝಿಲ್, ಮಣಿಕಂಠನ್ ಮತ್ತು ನಾಝಿಮ್ ಪಾಷಾ ಬಂಧಿತ ಆರೋಪಿಗಳೆಂದು ಸಿಸಿಬಿ ಪೊಲೀಸರು ಗುರುತಿಸಿದ್ದಾರೆ.

ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ದೂರವಾಣಿನಗರದ ಟಿನ್ ಕಾರ್ಖಾನೆ ಬಸ್ ನಿಲ್ದಾಣದ ಹತ್ತಿರ ಮೂವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ತೆರಳಿ ಮೂವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಮಾರಾಟ ಬೆಳಕಿಗೆ ಬಂದಿದೆ.

ಆರೋಪಿಗಳಿಂದ 1.5 ಕೆಜಿ ಗಾಂಜಾ, 2 ಮೊಬೈಲ್, ಬೈಕ್ ಹಾಗೂ 4 ಸಾವಿರ ನಗದು ಒಂದು ದ್ವಿಚಕ್ರ ವಾಹನ ಹಾಗೂ 4 ಸಾವಿರ ರೂ.ನಗದು ವಶಕ್ಕೆ ಪಡೆದು ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News