ಕುಲ್‌ದೀಪ್, ಚಾಹಲ್‌ರಿಂದ ಅಶ್ವಿನ್, ಜಡೇಜರಿಗೆ ಕಂಟಕ: ಭಜ್ಜಿ

Update: 2017-09-22 18:41 GMT

ಹೊಸದಿಲ್ಲಿ, ಸೆ.22: ಕುಲ್‌ದೀಪ್ ಹಾಗೂ ಚಾಹಲ್‌ರಿಂದ ಅಶ್ವಿನ್ ಹಾಗೂ ಜಡೇಜರಿಗೆ ಕಂಟಕ ಕಾದಿದೆಯೆಂದು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ದಂತಕತೆ ಹರ್ಭಜನ್ ಸಿಂಗ್ ಹೇಳಿದ್ದಾರೆ. ಕುಲ್‌ದೀಪ್‌ರ ಬೌಲಿಂಗ್ ಸ್ವಲ್ಪ ನಿಧಾನಗತಿ, ಚಾಹಲ್ ಬೌಲಿಂಗ್ ಮಟ್ಟ ಸ್ವಲ್ಪ ವೇಗಭರಿತವಾಗಿದೆ. 2001ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮಹತ್ವದ ಟೆಸ್ಟ್ ಸರಣಿಯ ವೇಳೆ ತಾನು 21ರ ಹರೆಯದ ಆಟಗಾರನಾಗಿದ್ದೆ, ಆಗ ಇದೇ ರೀತಿಯ ತಂತ್ರಗಾರಿಕೆ ನಡೆಸಿದ್ದೆ. ಹೀಗಿನ ಭಾರತ ಕ್ರಿಕೆಟ್ ತಂಡಕ್ಕೆ ಇದೇ ಬೇಕಾಗಿದೆ ಎಂದರು. ‘‘ಯುವ ಸ್ಪಿನ್ನರ್‌ಗಳು ವೃತ್ತಿ ಜೀವನದ ಆರಂಭದಲ್ಲಿಯೇ ಹ್ಯಾಟ್ರಿಕ್ ಗಳಿಸಿದರೆ ಅವರಿಗೆ ಅದು ಆಡಲು ಸ್ಫೂರ್ತಿ ಹಾಗೂ ಅವರಿಗೆ ಆಟದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ’’ ಎಂದು 2001ರಲ್ಲಿ ಈಡನ್‌ನಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ ಭಜ್ಜಿ ನೆನಪಿಸಿಕೊಂಡರು. ‘‘ಉತ್ತಮ ಆಟಗಾರ ಈಡನ್ ಗಾರ್ಡನ್ ಕ್ರೀಡಾಂಗಣದಿಂದ ಬರಿಗೈಯಿಂದ ವಾಪಸಾಗಲಾರ. ಆ ಕ್ಷಣವು ಅವನ ಹೆಸರು ಚರಿತ್ರೆ ಪುಸ್ತಕದಲ್ಲಿ ದಾಖಲಾಗುವುದು’’ ಎಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ 700 ವಿಕೆಟ್‌ಗಳನ್ನು ತನ್ನ ಬಗಲಿಗೆ ಹಾಕಿಕೊಂಡ 37ರ ಹರೆಯದ ಸಿಂಗ್ ತಿಳಿಸಿದರು. 22ರ ಹರೆಯದ ಗೂಗ್ಲಿ ಸ್ಪಿನ್ನರ್‌ಗಳ ಉತ್ತಮ ಆಟದ ಕೊಡುಗೆಯಿಂದ 50 ಓವರ್‌ಗಳ ಏಕದಿನ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜರ ಆಯ್ಕೆ ತಲೆನೋವಾಗಿ ಪರಿಣಮಿಸಲಿದೆ.

 ‘‘ಈ ಇಬ್ಬರ ವಿಭಿನ್ನ ಶೈಲಿಯ ಆಕ್ರಮಣಕಾರಿ ಬೌಲಿಂಗ್ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದೆ. ಇದರ ಬಗ್ಗೆ ತಾನು ಹೆಮ್ಮೆ ಪಡುತ್ತೇನೆ’’ ಎಂದರು ಭಜ್ಜಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News