ಬೆಂಗಳೂರು: ಪ್ರಯಾಣಿಕನ ಚಿನ್ನಾಭರಣ, ನಗದು ದರೋಡೆ
Update: 2017-09-23 18:57 IST
ಬೆಂಗಳೂರು, ಸೆ.23: ವ್ಯಕಿಯೊಬ್ಬರನ್ನು ಆಟೊದಲ್ಲಿ ಹತ್ತಿಸಿಕೊಂಡು ಹಲ್ಲೆ ನಡೆಸಿ ಚಿನ್ನಾಭರಣ, ನಗದು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿ ಸಿಖಂದರ್ ಎಂಬವರು ರೈಲ್ವೆ ನಿಲ್ದಾಣಕ್ಕೆ ಹೋಗುವ ಸಲುವಾಗಿ ಶುಕ್ರವಾರ ಬೆಳಗ್ಗೆ 6ಗಂಟೆಗೆ ಆಟೊ ಹತ್ತಿದ್ದಾರೆ. ಆಟೊದಲ್ಲಿ ಮೊದಲೇ ಒಬ್ಬ ವ್ಯಕ್ತಿ ಕುಳಿತಿದ್ದನು. ಆಟೊ ಸ್ವಲ್ಪದೂರ ಹೋಗುತ್ತಿದ್ದಂತೆ ಮಾರ್ಗ ಮಧ್ಯೆ ಆಟೊ ಚಾಲಕ ಹಾಗೂ ಮತ್ತೊಬ್ಬ ಸೇರಿಕೊಂಡು ಸಿಖಂದರ್ ಮೇಲೆ ಹಲ್ಲೆ ಮಾಡಿ ಒಂದು ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ಗಡಿಯಾರ ಹಾಗೂ ಮೊಬೈಲ್ ಕಿತ್ತುಕೊಂಡು ಕೆಳಕ್ಕೆ ತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಯಲಹಂಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.