×
Ad

ಮೃತ ಪಟ್ಟ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ

Update: 2017-09-23 21:54 IST

ಬೆಂಗಳೂರು, ಸೆ. 23: ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದಾದ ಅನಾಹುತದಲ್ಲಿ ಮೃತ ಪಟ್ಟಿದ್ದ ರಮೇಶ್ ಮತ್ತು ಭಾರತಿ ಕುಟುಂಬಸ್ಥರ ಸಮ್ಮುಖದಲ್ಲಿ ಅವರ ಮಕ್ಕಳಾದ ಆರ್.ರೋಹಿತ್ ಮತ್ತು ಆರ್.ರಾಹುಲ್‌ಗೆ ಮೇಯರ್ ಜಿ.ಪದ್ಮಾವತಿ ಪರಿಹಾರದ ಚೆಕ್ ವಿತರಿಸಿದರು.

ತಲಾ 5 ಲಕ್ಷದಂತೆ, ಒಟ್ಟು 10 ಲಕ್ಷದ ಚೆಕ್ ಅನ್ನು ಮೇಯರ್ ಕೊಠಡಿಯಲ್ಲಿ ವಿತರಿಸಿದರು.

ಈ ವೇಳೆ ಪರಿಹಾರ ಚೆಕ್ ಸ್ವೀಕರಿಸಿದ ಕುಟುಂಬಸ್ಥರು ಮಕ್ಕಳಿಗೆ ಸರಕಾರಿ ಕೆಲಸ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ರೋಹಿತ್ ಅರ್ಜಿಯನ್ನು ಸ್ವೀಕರಿಸಿ, ಉದ್ಯೋಗ ನೀಡಲು ಆಯುಕ್ತರಿಗೆ ಕ್ರಮ ವಹಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News