ಪುರುಷರ ಸಿಂಗಲ್ಸ್ ನಲ್ಲಿ ವಿಕ್ಟರ್ ಅಕ್ಸೆಲ್‌ಸನ್ ಫೈನಲ್‌ಗೆ

Update: 2017-09-23 18:39 GMT

ಟೊಕಿಯೋ, ಸೆ.23: ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸನ್ ಜಪಾನ್ ಓಪನ್ ಪುರುಷರ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.

  ವಿಕ್ಟರ್ ಅಕ್ಸೆಲ್‌ಸನ್ ಅವರು ವಿಶ್ವದ ನಂ.1 ದಕ್ಷಿಣ ಕೊರಿಯಾದ ಸನ್ ವ್ಯಾನ್ -ಹೊ ವಿರುದ್ಧ 21-16, 21-16 ಅಂತರದಲ್ಲಿ ಜಯ ಗಳಿಸಿದರು.

ಫೈನಲ್‌ನಲ್ಲಿ ವಿಕ್ಟರ್ ಅವರು ಮಲೇಷ್ಯಾದ ಲೀ ಚಾಂಗ್ ವೇ ಅವರನ್ನು ಎದುರಿಸಲಿದ್ದಾರೆ.

  ಲೀ ಅವರು ಸೆಮಿಫೈನಲ್‌ನಲ್ಲಿ ಚೀನಾದ ಶಿ ಯೂಕಿ ವಿರುದ್ಧ 21-19, 21-8 ಅಂತರದಲ್ಲಿ ಜಯ ಸಾಧಿಸಿದರು.

  ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ಫೈನಲ್ ತಲುಪಿದ್ದಾರೆ. ಜಪಾನ್‌ನ ನೊರೊಮಿ ಒಕುಹಾರ ಅವರು ಕಾಲು ನೋವಿನಿಂದಾಗಿ ಸೆಮಿಫೈನಲ್‌ನಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಮರಿನ್ ಸುಲಭವಾಗಿ ಫೈನಲ್‌ಗೆ ತೇರ್ಗಡೆಯಾದರು.

ಮರಿನ್ ಚೀನಾದ ಹಿ ಬಿಂಗ್‌ಜಾವೊ ಅವರನ್ನು ಎದುರಿಸಲಿದ್ದಾರೆ. ಬಿಂಗ್‌ಜಾವೊ ಅವರು ಚೆನ್ ಯುಫೈ ಅವರನ್ನು ಸೆಮಿಫೈನಲ್‌ನಲ್ಲಿ 21-14, 25-23 ಅಂತರದಲ್ಲಿ ಸೋಲಿಸಿ ಫೈನಲ್‌ಗೆ ತೇರ್ಗಡೆಯಾದರು.

ವಿಶ್ವ ಚಾಂಪಿಯನ್ ಒಕುಹಾರ ತವರಿನಲ್ಲಿ ಮತ್ತೊಮ್ಮೆ ಟ್ರೋಪಿ ಗೆಲ್ಲುವ ಕನಸು ಕಂಡಿದ್ದರು. 2015ರಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು. ಆದರೆ ಅವರ ಕನಸು ಈಡೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News