ರೂಪಾಂತರಗೊಳ್ಳುವ ಮನೆ

Update: 2017-09-24 11:40 GMT

ಮಳೆಗಾಲ ಮುಗಿದು ಚಳಿಗಾಲ ಇನ್ನೇನು ಶುರುವಾಗಲಿದೆ. ಚಳಿಗೆ ಆದಷ್ಟು ಹೆಚ್ಚಾಗಿ ಸೂರ್ಯನ ಬೆಳಕು ಬಿದ್ದು ಸುತ್ತಲಿ ರುವ ವಾತಾವರಣ ಬೆಚ್ಚಗಾದರೆ ಅದೇ ಸ್ವರ್ಗ. ಇರುವ ಒಂದು ಮನೆ ಯಲ್ಲಿ ಈ ರೀತಿಯ ಬಯಕೆ ಪೂರೈಸಲಾಗದು. ಆದರೆ ಮನಸ್ಸಿದ್ದರೆ ಮಾರ್ಗವುಂಟು. ಈ ಕಲ್ಪನೆಯೊಂದಿಗೆ ಹಲವು ವರ್ಷಗಳ ಕಾಲ ಪ್ರಯೋಗಿಸಿ, ಪ್ರಾಮಾಣಿಸಿ ಒಂದು ಮನೆಯನ್ನು ಕಟ್ಟಲಾಗಿದೆ.

                           (ಚಿತ್ರ-1)

 ಡೆವನ್ ಹೌಸ್ ಎಂದು ಕರೆಯಲಾಗುತ್ತಿರುವ ಈ ಮನೆಯನ್ನು ಎರಡು ಮಿಲಿಯನ್ ಪೌಂಡ್‌ಗಳ ವೆಚ್ಚದಲ್ಲಿ ದೂರದ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಕಟ್ಟಲಾಗಿದೆ. ಇದರ ವೈಶಿಷ್ಟಯೇನೆಂದರೆ, ಈ ಮನೆ ಚಳಿಗಾಲದಲ್ಲಿ ಚತುರ್ಭುಜಾಕಾರದಲ್ಲಿದ್ದು, ಬೇಸಿಗೆಯಲ್ಲಿ ತ್ರಿಕೋನಾಕಾರದಲ್ಲಿರುತ್ತದೆ. ಅಲ್ಲದೇ ಸಿಮೆಂಟ್, ಕಾಂಕ್ರಿಟ್ ಗೋಡೆಗಳು, ಗಾಜಿನ ಕಿಟಕಿಗಳು ತಿರುಗಿ, ಸ್ಥಳ ಬದಲಾಯಿಸುತ್ತವೆ. Dynamic Haus ಎಂಬ ಕಂಪೆನಿಯೊಂದು ಈ ಮೊದಲ ತಿರುಗುವ ಟೇಬಲ್, ಬೆಳಕಿನ ವ್ಯವಸ್ಥೆ ಮುಂಚೆ ನಿರೂಪಿಸುತ್ತಿತ್ತು. ಈಗ ಅದೇ ರೀತಿಯ ತಿರುಗುವ ವ್ಯವಸ್ಥೆಯನ್ನು ಮನೆಯೊಂದಕ್ಕೆ ಅಳವಡಿಸಿ ಭವಿಷ್ಯತ್ತಿನ ಮನೆಯನ್ನಾಗಿ ರೂಪಿಸಿದೆ. (ಚಿತ್ರ-1).

ಒಂದು ಕಲ್ಪನೆ ಸಾಕಾರಗೊಂಡಿರುವುದಕ್ಕೆ ಇದೊಂದು ಉದಾ ಹರಣೆಯಾಗಿರಬಹುದು. ಆದರೆ ಮೂಲತಃ ಇದು ರೇಖಾ ಗಣಿತದ ಒಂದು ಸಮಸ್ಯೆ ಮತ್ತು ಅದರ ಪರಿಹಾರ, ಗಣಿತದ ಒಗಟು ಎಂದೇ ತಿಳಿಯಬಹುದು. ಸಮಸ್ಯೆಯೇನೆಂದರೆ, ಒಂದು ಸಮಭುಜ ತ್ರಿಕೋನವನ್ನು ಚೌಕಾಕೃತಿಯಾಗಿ ಹೇಗೆ ಪರಿವರ್ತಿಸಬಹುದು ?

                           (ಚಿತ್ರ-2)

ಇಂಗ್ಲಿಷ್ ಗಣಿತಜ್ಞರಾದ ಹೆನ್ರಿ ಅರ್ನೆಸ್ಟ್ ಡ್ಯೂಡಿನೇ ಅವರಿಗೆ ಈ ಸಮಸ್ಯೆ ಮೂಡಿದ್ದು ಮತ್ತು ಅದರ ಪರಿಹಾರವನ್ನು 1908 ರಲ್ಲಿ ಅವರೇ ಕಂಡುಹಿಡಿದರು. ಇದರಲ್ಲಿ ಒಂದು ನಿಯಮವಿದೆ. ತ್ರಿಕೋನ ವನ್ನು ಮೂರು ಗೆರೆಗಳನ್ನು ಬಳಸಿ ನಾಲ್ಕು ಭಾಗಗಳಾಗಿ ಮಾತ್ರ ವಿಂಗಡಿಸಬೇಕು. ಈ ಸಮಸ್ಯೆಯನ್ನು ಹ್ಯಾಬರ್ಡಾಷರ್ ಸಮಸ್ಯೆ ಯೆಂದು ಕರೆಯುತ್ತಾರೆ. ಡ್ಯೂಡಿನೇ ಸರ್ ಅರ್ಥರ್ ಕಾನ್‌ನ ಡಾಯ್ಲಾ ಅವರೊಡನೆ ಜೊತೆಗೂಡಿ ಹಲವಾರು ಗಣಿತದ ಒಗಟುಗಳನ್ನು ಪರಿಚಯಿಸಿದ್ದಾರೆ. ರಾಯಲ್ ಸೊಸೈಟಿಯಲ್ಲಿ ಇವರು ಪರಿಚಯಿ ಸಿದ ಒಗಟುಗಳನ್ನು ಮತ್ತು ಅವುಗಳ ಉತ್ತರವನ್ನು ಪ್ರದರ್ಶಿಸಿದ್ದಾರೆ.

 (ಚಿತ್ರ-3)

ಈಗ ಡೇವನ್ ಹೌಸ್ ಬಗ್ಗೆ ಇನ್ನಷ್ಟು ತಿಳಿಯೋಣ. ಈ ಮನೆ ಯಲ್ಲಿ ಮಲಗುವ ಕೋಣೆ, ಊಟದ ಕೋಣೆ ಮತ್ತು ಮೊಗಸಾಲೆ ಗಳನ್ನು ಮೂರು ತಿರುಗಣೆ/ಕೀಲುಗಳನ್ನಾಗಿ ಬಳಸಲಾಗಿದೆ. (ಚಿತ್ರ-3) ಈ ತಿರುಗಣೆಗಳ ಸ್ಥಾನವನ್ನು ತ್ರಿಕೋನಾಕೃತಿಯಲ್ಲಿ (ಚಿತ್ರ-4)ರಲ್ಲಿರು ವಂತೆ ಗುರುತಿಸಿರುತ್ತಾರೆ. ಜಲಚಾಲಿತ ಯಂತ್ರಗಳ ಮೂಲಕ ಮನೆಯನ್ನು ಈ ತಿರುಗಣೆಗಳ ಮೂಲಕ ಅರಳಿಸಿ, ಹೊರಳಿಸಿ, ಕೂಡಿಸಿ ಚತುರ್ಭುಜಾಕೃತಿಯನ್ನಾಗಿ ಮಾಡುವಂತೆ ವಿನ್ಯಾಸಗೊಳಿ ಸಲಾಗಿದೆ. ಋತುಮಾನಕ್ಕನುಗುಣವಾಗಿ, ದಿನಂಪ್ರತಿ, ಸೂರ್ಯನ ಬೆಳಕನ್ನು ಅನುಸರಿಸಿ ಈ ಮನೆಯನ್ನು ಹೊರಳಿಸಬಹುದು (ಚಿತ್ರ-2).ಅಲ್ಲದೇ, ಸೂರ್ಯನ ಬೆಳಕನ್ನೆ ಬಳಸಿ ವಿದ್ಯುತ್ತನ್ನು ಉತ್ಪಾದಿಸಲಾ ಗುತ್ತದೆ. ಬೆಂಕಿ, ಕಳ್ಳಕಾಕರುಗಳಿಂದ ರಕ್ಷಿಸಲು ಬಾಗಿಲುಗಳನ್ನು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. 2012ರಲ್ಲಿ ನಿರ್ಮಿ ಸಿದರೂ ಹಲವು ಮಾರ್ಪಾಡುಗಳೊಂದಿಗೆ ಪುನರ್‌ನಿರ್ಮಿಸಲಾಗಿದೆ. ಲಂಡನ್ ಪೌರಸಂಸ್ಥೆಯಿಂದ ಅನುಮತಿ ದೊರೆತರೆ, ಎಲ್ಲೆಡೆ ಈ ಮನೆಗಳು ಭವಿಷ್ಯತ್ತಿನಲ್ಲಿ ನೋಡಲು ಸಿಗಬಹುದು.

ಸಮಸ್ಯೆಯೊಂದನ್ನು ಸಮಸ್ಯೆಯಾಗಿಯೇ ಉಳಿಯಗೊಟ್ಟರೆ ಎಂದಿಗೂ ಸಮಸ್ಯೆಯಾಗಿರುತ್ತದೆ. ಆದರೆ ಕುತೂಹಲದಿಂದ ದಿಟ್ಟವಾಗಿ ಮುನ್ನಡೆದರೆ, ಯಾವ ಸಮಸ್ಯೆಯೂ ಸಮಸ್ಯೆ ಯಾಗಿರುವುದಿಲ್ಲ. ಜೊತೆಗೆ ಕ್ರಿಯಾತ್ಮಕವಾಗಿದ್ದರೆ, ಈ ರೀತಿಯ ರೂಪಾಂತರಗೊಳ್ಳುವ ಮನೆಯಂತಹ ಉದಾಹರಣೆಗಳು ಎಲ್ಲೆಡೆ ಸಿಗಬಹುದು.

                    (ಚಿತ್ರ-4)

Writer - ಪ್ರಭಾವತಿ.ಪಿ,

contributor

Editor - ಪ್ರಭಾವತಿ.ಪಿ,

contributor

Similar News