ಇನ್ಫೋಸಿಸ್-ಭಾರತೀಯ ವಿಜ್ಞಾನ ಸಂಸ್ಥೆ ಒಡಂಬಡಿಕೆ

Update: 2017-09-25 13:54 GMT

ಬೆಂಗಳೂರು, ಸೆ. 25: ಸೋಂಕು ಆಧಾರಿತ ರೋಗಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇನ್ಫೋಸಿಸ್ ಸಂಸ್ಥೆಯ ಸಮಾಜಸೇವಾ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇನ್‌ಫೆಕ್ಷಸ್ ಡಿಸೀಸ್ ರೀಸರ್ಚ್(ಸಿಐಡಿಆರ್)ನಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಪಡಿಸುವುದು ಒಪ್ಪಂದದ ಉದ್ದೇಶ.

ಈ ಒಡಂಬಡಿಕೆಯನ್ವಯ ನೀಡಲಾಗುವ 5 ಕೋಟಿ ರೂ.ಹಣದಲ್ಲಿ ಜಾಗೃತಿ ಮೂಡಿಸಲು ಬಳಕೆ ಮಾಡಲಾಗುವುದು. ಇದರಿಂದ 25 ಸಿಬ್ಬಂದಿ ಮತ್ತು 250 ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಲಿದೆ. ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ವಿಜ್ಞಾನ ಮತ್ತು ಉನ್ನತ ಶಿಕ್ಷಣ ಕುರಿತ ಸಂಶೋಧನೆಗೆ ಒತ್ತು ನೀಡುವ ಸಾರ್ವಜನಿಕ ವಿಶ್ವ ವಿದ್ಯಾನಿಲಯ, ಈಗ ಸೋಂಕು ಆಧಾರಿತ ರೋಗಗಳ ನಿಯಂತ್ರಣ ಸಂಶೋಧನೆಗೆ ಒತ್ತು ನೀಡಲಿದ್ದು, ಔಷಧ ಸಂಶೋಧನೆ, ಔಷಧ ವಿತರಣಾ ವ್ಯವಸ್ಥೆ, ತಪಾಸಣಾ ಕ್ರಮ ಕುರಿತು ಅಧ್ಯಯನ ನಡೆಸಲಿದೆ.

ಈ ವೇಳೆ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾಮೂರ್ತಿ, ‘ಈ ಒಡಂಬಡಿಕೆಯ ಮೂಲಕ ಇನ್ಫೋಸಿಸ್ ಫೌಂಡೇಶನ್ ಸೋಂಕು ಆಧಾರಿತ ರೋಗಗಳ ಸಂಶೋಧನೆಯಲ್ಲಿ ಕೆಲವೊಂದು ಮೈಲುಗಲ್ಲು ಸಾಧಿಸುವ ಗುರಿ ಹೊಂದಿದೆ. ನಾವು ಸಂಶೋಧನೆಗೆ ಒತ್ತು ನೀಡುವ ಮೂಲಕ ಸೋಂಕು ಆಧಾರಿತ ರೋಗಗಳ ಬಗ್ಗೆ ತರಬೇತಿ ಅಗತ್ಯ ಕುರಿತು ಜಾಗೃತಿ ಮೂಡಿಸಲಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News