ಐದು ಕೋಟಿ ರೂ. ಹಳೆ ನೋಟುಗಳ ಸಾಗಾಟ: ಮೂವರ ಬಂಧನ

Update: 2017-09-25 16:09 GMT

ಬೆಂಗಳೂರು, ಸೆ.25: ಅಮಾನ್ಯಗೊಂಡಿರುವ ನೋಟುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿ 5.40 ಕೋಟಿ ರೂ.ಮೌಲ್ಯದ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಜಯನಗರದ ಮಹಮ್ಮದ್ ಅಸ್ಲಂ, ಬಳ್ಳಾರಿಯ ಕಾಳಿಂಗಪ್ಪ ಮತ್ತು ಕಾರು ಚಾಲಕ ಮಂಜುನಾಥ್ ಎಂದು ಗುರುತಿಸಲಾಗಿದೆ.

ಮಹಾಲಕ್ಷ್ಮಿ ಲೇಔಟ್‌ನ ಈಜುಗೊಳದ ಬಳಿ ಹಳೆ ನೋಟುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅಮಾನ್ಯಗೊಂಡಿದ್ದ 1 ಸಾವಿರ ರೂ.ಮುಖ ಬೆಲೆಯ 5 ಕೋಟಿ 40 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News