ಲೈಂಗಿಕ ಕಿರುಕುಳ: ಇಬ್ಬರ ಬಂಧನ

Update: 2017-09-25 16:19 GMT

ಬೆಂಗಳೂರು, ಸೆ.25: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೆ.ಪಿ.ನಗರದ ಎರಡನೆ ಹಂತದಲ್ಲಿ ನಡೆದಿದೆ.

ಬಂಧಿತರನ್ನು ಸಾರಕ್ಕಿಯ ಅಭಿಷೇಕ್‌ಗೌಡ, ಜೆ.ಪಿ.ನಗರದ ಅರವಿಂದ್ ಎಂದು ಗುರುತಿಸಲಾಗಿದೆ.

ಯುವತಿಯು ರವಿವಾರ ರಾತ್ರಿ ಜೆ.ಪಿ.ನಗರದ ಮೆಟ್ರೊ ನಿಲ್ದಾಣದ ಬಳಿ ನಿಂತಿದ್ದಾಗ ಆರೋಪಿಗಳಿಬ್ಬರೂ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಯುವತಿಯು ಹೊಯ್ಸಳಕ್ಕೆ ಫೋನ್ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದು ಯುವತಿಗೆ ರಕ್ಷಣೆ ನೀಡಿದ್ದಾರೆ.

ಈ ಮೊಕದ್ದಮೆ ದಾಖಲಿಸಿಕೊಂಡಿರುವ ಜೆ.ಪಿ.ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News