ಸಿಬಿಐ ತನಿಖಾ ತಂಡ ಬದಲಿಸಲು ಆಗ್ರಹ

Update: 2017-09-25 16:30 GMT

ಬೆಂಗಳೂರು, ಸೆ. 25: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ತಂಡದಿಂದ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ, ಈ ತನಿಖಾ ತಂಡವನ್ನು ಬದಲಿಸಿ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ರಚಿಸಬೇಕು ಎಂದು ನಿವೃತ ಐಎಎಸ್ ಅಧಿಕಾರಿ ವಿಜಯಕುಮಾರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷ್ಠಾವಂತ ಅಧಿಕಾರಿಯ ಸಾವಿಗೆ ಕಾರಣವಾದವರನ್ನು ಪತ್ತೆಹಚ್ಚಲು ಸಿಬಿಐ ವಿಲವಾಗಿದೆ. ತನಿಖಾ ತಂಡ ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತನಿಖೆಗೆ ಬೇಕಾದ ಎಲ್ಲ ಮಾಹಿತಿಯನ್ನು ನೀಡಿದರು ಸಿಬಿಐ ಮಾತ್ರ ಪರಿಗಣಿಸಲೇ ಇಲ್ಲ. ಅನುರಾಗ್ ತಿವಾರಿ ಅತಿಯಾದ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದರು ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಇತ್ತೀಚಿಗೆ ಬಂದ ವೈದ್ಯಕೀಯ ವರದಿ ಅವರು ಕೊಲೆಯಾಗಿದ್ದಾರೆ ಎಂಬ ಅಂಶ ಬಹಿರಂಗಗೊಳಿಸಿದೆ ಎಂದು ಹೇಳಿದರು.

ಸಾವಿನ ಹಿಂದಿನ ದಿನ ಲಕ್ನೋ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದರು. ಅವರ ಜತೆ ಇದ್ದ ಅಧಿಕಾರಿ ಪಿ.ಎನ್.ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಬಧಿಸಲಿಲ್ಲ. ಅಲ್ಲಿದ್ದ ಮುಖ್ಯ ದಾಖಲೆಗಳನ್ನು ನಾಶ ಮಾಡಿದವರ ಬಗ್ಗೆ ವಿಚಾರಣೆ ನಡೆದಿಲ್ಲ. ವ್ಯವಸ್ಥಿತವಾಗಿ ಪ್ರಕರಣವನ್ನು ಹಾದಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳಿಗೆ ರಾಜ್ಯದ ಪ್ರಭಾವಿ ರಾಜಕೀಯ ಮುಖಂಡರನ್ನು, ಅಧಿಕಾರಿಗಳನ್ನು ತನಿಖೆ ನಡೆಸುವ ಅಧಿಕಾರವಿಲ್ಲ ಎಂದು ಹೇಳುವ ತನಿಖಾ ದಳ ಅಸಮರ್ಥವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐ ಅಧಿಕಾರಿಗಳ ವರ್ತನೆ ಕಂಡಾಗ ಸಾಕ್ಷ ನಾಶಗೊಳಿಸುವ ಪಿತೂರಿ ನಡೆಸುತ್ತಿದ್ದಾರೆ. ಈಗಾಗಲೇ ಮಹತ್ವದ ದಾಖಲೆಗಳಾದ ವೀಡಿಯೊ, ಅವರ ಮೊಬೈಲ್ ಕರೆಗಳು ಹಾಗೂ ಸರಕಾರದ ಪ್ರಮುಖ ಇಲಾಖೆಯೊಂದರ ಭ್ರಷ್ಠಾಚಾರವನ್ನು ಬಯಲಿಗೆಳೆಯಲು ಸಿದ್ಧತೆ ನಡೆಸುತ್ತಿದ್ದರ ಕುರಿತು ಮಾಹಿತಿಗಳನೆಲ್ಲ ನೀಡಿದ್ದೇನೆ. ಆದರೆ, ಸಿಬಿಐ ಇವೆಲ್ಲವನ್ನು ಪರಿಗಣಿಸಲಿಲ್ಲ. ತನಿಖಾ ವೇಳೆಯಲ್ಲಿ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ 15ರಿಂದ 20 ದಿನಗಳು ಗೌಪ್ಯವಾಗಿ ಓಡಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿದರು.

ಅನುರಾಗ್ ತಿವಾರಿ ಹತ್ಯೆಯಾಗುವ ಕೆಲವೇ ಘಂಟೆಗಳ ಮುಂದೆ ಬೆಂಗಳೂರಿಗೆ ಬರಲು ವಿಮಾನ ಸೀಟು ಕಾಯ್ದಿರಿಸಿದ್ದರು. ಅನಂತರ ಟಿಕೆಟ್ ರದ್ಧು ಮಾಡಿ, ಪುನಃ ಮತ್ತೊಂದು ಬಾರಿ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅವರನ್ನು ಲಕ್ನೋದಲ್ಲಿಯೇ ಉಳಿದುಕೊಳ್ಳಲು ಒತ್ತಡ ಹೇರಲಾಗಿದೆ. ಅಂದರೆ, ಅವರು ಉಳಿದುಕೊಂಡಿದ್ದ ಗೆಸ್ಟ್‌ಗೌಸ್‌ನಲ್ಲಿದ್ದ ಸಿಸಿಟಿವಿಯನ್ನು ಸರಿಯಾಗಿ ಪರಿಶೀಲನೆ ನಡೆಸಲಿಲ್ಲ. ಹೀಗೆ ಅನೇಕ ಪ್ರಶ್ನೆಗಳು ಎದುರಾಗಿದ್ದು, ಈ ಕುರಿತು ಕೇಂದ್ರ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ ತನಿಖೆ ನಡೆಸುತ್ತಿರುವ ತನಿಖಾ ದಳಕ್ಕೆ ಈ ಪ್ರಕರಣವನ್ನು ಬೇಧಿಸುವ ಶಕ್ತಿ ಇಲ್ಲ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News