×
Ad

‘ಮೂಡಲಗಿ’ ತಾಲೂಕು ಕೇಂದ್ರ ಪಟ್ಟಿಯಿಂದ ಕೈಬಿಡಬೇಡಿ

Update: 2017-09-26 22:15 IST

ಬೆಂಗಳೂರು, ಸೆ. 26: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ‘ಮೂಡಲಗಿ’ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೊಷಿಸಿದ್ದು, ಇದೀಗ ಹೊಸ ತಾಲೂಕುಗಳ ಪಟ್ಟಿಯಿಂದ ಮೂಡಲಗಿಯನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿಗೆ ಜಗದೀಶ್ ಶೆಟ್ಟರ್, ಪತ್ರ ಬರೆದಿದ್ದಾರೆ. 1973ರ ವಾಸುದೇವ್ ರಾವ್ ಆಯೋಗ, 1984ರ ಟಿಂ.ಎಂ.ಹುಂಡೇಕರ್ ಸಮಿತಿ, 1986ರ ಪಿ.ಸಿ.ಗದ್ದೀಗೌಡರ್ ಸಮಿತಿ ಹಾಗೂ 2007ರ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯ ತಾಲೂಕು ಪುನರ್ ರಚನಾ ಸಮಿತಿ ವರದಿ ಆಧರಿಸಿ ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲಾಗಿತ್ತು.
ಒಟ್ಟು 408.05 ಚದರ ಕಿ.ಮೀ ವಿಸ್ತೀರ್ಣ ಹಾಗೂ 1,34,914 ಜನಸಂಖ್ಯೆಯುಳ್ಳ ಮೂಡಲಗಿ ಪಟ್ಟಣ ತಾಲೂಕು ಕೇಂದ್ರ ಆಗುವ ಎಲ್ಲ ಅರ್ಹತೆಗಳಿವೆ. ಆದರೂ, ಹೊಸ ತಾಲೂಕುಗಳ ಪಟ್ಟಿಯಿಂದ ಮೂಡಲಗಿ ಪಟ್ಟಣ ಕೈಬಿಟ್ಟಿದ್ದು ಸರಿಯಲ್ಲ. ಹೀಗಾಗಿ ಮೂಡಲಗಿ ಪಟ್ಟಣವನ್ನು ಹೊಸ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News