×
Ad

ಪತ್ನಿಯ ಹೊಟ್ಟೆ ಮೇಲೆ ಬಿಸಿ ಇಸ್ತ್ರಿ ಪೆಟ್ಟಿಗೆಯಿಟ್ಟ ವಿಕೃತ: ಪತಿ ಬಂಧನ

Update: 2017-09-26 22:24 IST

ಬೆಂಗಳೂರು, ಸೆ.26: ಕೌಟುಂಬಿಕ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿ ಆಕೆ ಮೇಲೆ ಹಲ್ಲೆ ನಡೆಸಿ ಹೊಟ್ಟೆ ಮೇಲೆ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟು ವಿಕೃತವಾಗಿ ವರ್ತಿಸಿದ್ದ ಪತಿಯನ್ನು ಇಲ್ಲಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನಗರದ ಬಾಣಸವಾಡಿಯ ನಿವಾಸಿ ದಿಲೀಪ್‌ಕುಮಾರ್ ಎಂಬಾತ ಆರೋಪಿಯಾಗಿದ್ದು, ಪತಿಯ ವರ್ತನೆಯಿಂದ ಗಾಯಗೊಂಡಿರುವ ಪತ್ನಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂಟೀರಿಯರ್ ಡೆಕೋರೇಟರ್ ಆಗಿರುವ ದಿಲೀಪ್‌ಕುಮಾರ್ ಎಂಬಾತ ಕೌಟುಂಬಿಕ ವಿಚಾರವಾಗಿ ಪತ್ನಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದ್ದು, ಸೆ.24ರಂದು ಮದ್ಯದ ಅಮಲಿನಲ್ಲಿ ಪತ್ನಿಗೆ ಒಡೆದು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾನೆ. ಇದರಿಂದ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಿಲೀಪ್‌ಕುಮಾರ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News