ಕನ್ನಡಿಗರ ಮನೆ ನೆಲಸಮ ಸಲ್ಲ: ಸಿದ್ದರಾಮಯ್ಯ
Update: 2017-09-26 22:44 IST
ಬೆಂಗಳೂರು, ಸೆ. 26: ಗೋವಾದ ಬೈನಾ ಕಡಲ ಕಿನಾರೆಯಲ್ಲಿದ್ದ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿರುವ ಗೋವಾ ಸರಕಾರದ ಕ್ರಮ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಮನೆಗಳನ್ನು ಕೆಡವಿ ಹಾಕಿರುವುದು ಸರಿಯಲ್ಲ. ಈ ಸಂಬಂಧ ಅಲ್ಲಿನ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.